Oct 27, 2020, 12:27 PM IST
ಬೆಂಗಳೂರು (ಅ. 27): ಕೊರೊನಾ ಹಿನ್ನಲೆಯಲ್ಲಿ ಜಾತ್ರೆ, ಸಮಾರಂಭ, ಜನ ಸೇರುವ ಕಾರ್ಯಕ್ರಮಗಳಿಗೆ ನಿಷೇದ ಹೇರಲಾಗಿದ್ದರೂ ಜನ ಮಾತ್ರ ಯಾವುದಕ್ಕೂ ಕೇರ್ ಮಾಡುತ್ತಿಲ್ಲ. ಬಳ್ಳಾರಿ-ಆಂಧ್ರದ ಗಡಿ ಭಾಗದಲ್ಲಿರುವ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದ ಪ್ರಯುಕ್ತ ಬಡಿಗೆ ಜಾತ್ರೆ ನಡೆಸಲಾಗಿದೆ. ಅರಕೇರ ಹಾಗೂ ನೀರಣಿಕೆ ಗ್ರಾಮಸ್ಥರು ದೇವರ ಮೂರ್ತಿಗಾಗಿ ಬಡಿದಾಡಿಕೊಂಡು ಹರಕೆ ತೀರಿಸಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಕಿಂಗ್‌ಪಿನ್ ಅರೆಸ್ಟ್
ದಸರಾ ಹಬ್ಬದ ದಿನ ರಾತ್ರಿ ಪೂಜೆ ಬಳಿಕ ಉತ್ಸವ ಮೂರ್ತಿಯನ್ನು ಹೊರಗೆ ತರಲಾಗುತ್ತದೆ. ಆಗ ಉತ್ಸವ ಮೂರ್ತಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಲು ಬಡಿದಾಡಿಕೊಳ್ಳುತ್ತಾರೆ. ಯಾವ ಊರಿಗೆ ತೆಗೆದುಕೊಂಡು ಹೋಗಲಾಗುತ್ತದೋ ಆ ಊರಿಗೆ ಒಳ್ಳೆಯದಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ.