May 14, 2020, 1:57 PM IST
ರಾಮನಗರ(ಮೇ.14): ಜಿಲ್ಲೆಯ ಕನಕಪುರ ತಾಲೂಕಿನ ಕೊಳವಂಡನಹಳ್ಳಿಯಲ್ಲಿ ಗ್ರಾಮದಲ್ಲಿ ಮಾರಕ ಕೊರೋನಾ ಆತಂಕದ ಮಧ್ಯೆ ಮಾರಮ್ಮ ದೇವಿಯ ಜಾತ್ರೆ ಅದ್ಧೂರಿಯಾಗಿ ನಡೆದಿದೆ. ಸರ್ಕಾರದ ಆದೇಶಗಳನ್ನ ಗಾಳಿಗೆ ತೂರಿ ಅದ್ಧೂರಿಯಾಗಿ ಜಾತ್ರೆಯನ್ನ ನಡೆಸಿದ್ದಾರೆ. ಈ ವೇಳೆ ಗ್ರಾಮಸ್ಥರು ಯಾರೂ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ಜಾತ್ರೆಯನ್ನ ಮಾಡಿದ್ದಾರೆ.
ಪೇಯ್ಡ್ ಕ್ವಾರಂಟೈನ್‌ಗೆ ಪ್ರಯಾಣಿಕರ ವಿರೋಧ: ರೈಲಿನಲ್ಲಿ ಕುಡಿಯುವ ನೀರಿಗೂ ಅವ್ಯವಸ್ಥೆ
ಜಾತ್ರೆಗೆ ತಾಲೂಕಾಡಳಿಯವಾಗಲೀ, ಜಿಲ್ಲಾಡಳಿತವಾಗಲಿ ಯಾರೂ ಅನುಮತಿ ಕೊಟ್ಟಿಲ್ಲ. ಆದರೂ ಕೂಡ ಗ್ರಾಮಸ್ಥರು ಜಾತ್ರೆ ಮಾಡಿ ಖುಷಿ ಪಟ್ಟಿದ್ದಾರೆ. ಗಂಡಾಂತರ ಬಾರದಂತೆ ಮಾರಮ್ಮ ದೇವಿಗೆ ಜನರು ಬೇಡಿಕೊಂಡಿದ್ದಾರೆ.