Jul 4, 2021, 2:54 PM IST
ದಾವಣಗೆರೆ(ಜು.04): ಕೋವಿಡ್ ವ್ಯಾಕ್ಸಿನ್ ಕೌಂಟರ್‌ಗಳಲ್ಲಿ ಕಾರ್ಪೋರೇಟರ್‌ಗಳು ದಬ್ಬಾಳಿಕೆ ನಡೆಸಿದ ಘಟನೆ ಇಂದು(ಭಾನುವಾರ) ನಗರದಲ್ಲಿ ಇಂದು ನಡೆದಿದೆ. ನಾವು ಹೇಳಿದವರಿಗೆ ವ್ಯಾಕ್ಸಿನ್ ಕೊಡಬೇಕೆಂದು ವೈದ್ಯ ಸಿಬ್ಬಂದಿ ಮೇಲೆ ಕಾರ್ಪೋರೇಟರ್‌ಗಳು ಒತ್ತಡ ಹಾಕಿದ್ದಾರೆ. ಮಹಾನಗರ ಪಾಲಿಕೆ ನಗರ ಭಾಗದ ಪಿಹೆಚ್‌ಸಿಗಳಲ್ಲಿ ಈ ರೀತಿ ಒತ್ತಡ ಹಾಕಲಾಗುತ್ತಿದೆ. ಈ ಸಂಬಂಧ ವೈದ್ಯ ಸಿಬ್ಬಂದಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.