Davanagere: ಮಿಡಿಸೌತೆ ಸಂಸ್ಕರಣ ಘಟಕದ ತ್ಯಾಜ್ಯದಿಂದ ಭೂಮಿ ಬರಡು, ರೈತರಿಗೆ ಸಂಕಷ್ಟ

Jan 4, 2022, 3:17 PM IST

ದಾವಣಗೆರೆ (ಜ. 04): ರೈತರ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಒದಗಿಸುತ್ತಿರುವ ದಾವಣಗೆರೆ ಜಿಲ್ಲೆ (Davanagere) ಹೆಬ್ಬಾಳದಲ್ಲಿರುವ (Hebbala)  ಮಿಡಿಸೌತೆ  ಸಂಸ್ಕರಣ ಘಟಕವೊಂದು  ಕೆಲ ರೈತರ ಬದುಕನ್ನು ಕಸಿಯುವುದಕ್ಕೆ ಮುಂದಾಗಿದೆ. ಮಿಡಿಸೌತೆ ಘಟಕದಿಂದ ಹೊರಬೀಳುವ ರಾಸಾಯನಿಕಯುಕ್ತ ನೀರು ರೈತರ ಭೂಮಿಯನ್ನು ದಿನೇ ದಿನೇ ಬರಡು ಮಾಡುತ್ತಿದೆ.   ಲಕ್ಷಾಂತರ ಬಂಡವಾಳ ಹಾಕಿ ಕೃಷಿ ಮಾಡಿದ  ರೈತರ ಅಡಿಕೆ ತೋಟ  ತರಕಾರಿ ಬೆಳೆಗಳು ತ್ಯಾಜ್ಯ ನೀರಿನಿಂದ ಕಲುಶಿತವಾಗಿದೆ.  

Omicron Threat: ಮಾಧ್ಯಮಗಳು ಲಾಕ್‌ಡೌನ್‌ನಂತ ಕಠಿಣ ಪದ ಬಳಸೋದು ಬೇಡ: ಡಾ. ಸುಧಾಕರ್

ದಾವಣಗೆರೆ ಜಿಲ್ಲೆ  ಹೆಬ್ಬಾಳ (Hebbal)ಗ್ರಾಮ ಸಮೀಪ ಇರುವ  ಗ್ರೀನ್ ಆಗ್ರೋ ಪ್ಯಾಕ್ ಮಿಡಿಸೌತೆ ಸಂಸ್ಕರಣ ಘಟಕ ಕೆಲರೈತರಿಗೆ ಒಂದು ಅನುಕೂಲ ಮಾಡಿದ್ರೆ ಇನ್ನು ಕೆಲ ರೈತರ ಬದುಕನ್ನೆ ಕಸಿಯುತ್ತಿದೆ.  ಸಂಸ್ಕರಣ ಘಟಕದಿಂದ  ಹೊರ ಬೀಳುವ ತ್ಯಾಜ್ಯ ನೀರು ಅಕ್ಕಪಕ್ಕದ ರೈತರ ತೋಟಗಳನ್ನು  ಹಾಳು ಮಾಡಿದೆ. ಸಂಸ್ಕರಣ ಘಟಕದ ಬಳಿಇರುವ ಇಂಗುಗುಂಡಿಗಳಲ್ಲಿ ನಿಂತ ನೀರು  ಅಡಿಕೆ ತೋಟ ಸೇರಿದಂತೆ ತರಕಾರಿ ಬೆಳೆಯಿಂದ  ನಿರೀಕ್ಷಿತ ಫಸಲು ಬರಂದಂತಾಗಿದೆ.  11  ವರ್ಷಗಳ ಹಿಂದೆ ಹೆಬ್ಬಾಳ ಗ್ರಾಮದ  ರುದ್ರೇಶ್ ಎಂಬ ರೈತ ಮಾಡಿದ ಅಡಿಕೆ ತೋಟ  ಫಸಲು ಇಲ್ಲದೇ ಬಂಜೆಯಾಗಿದೆ. 5 ವರ್ಷಗಳ ನಂತರ  ಉತ್ತಮ ಅಡಿಕೆ ಬೆಳೆ ನಿರೀಕ್ಷೆ ಮಾಡಿದ್ದ ರೈತನಿಗೆ ತೀವ್ರ ನಿರಾಸೆಯಾಗಿದೆ.  

ಸಂಸ್ಕರಣ ಘಟಕದ ಸುತ್ತಮುತ್ತಲ   ಅಡಿಕೆ ತೋಟದಲ್ಲಿರುವ ಬೋರ್ ವೆಲ್ ನಲ್ಲಿ ಉಪ್ಪು ನೀರು ಬರುತ್ತಿದೆ.  ಮಿಡಿಸೌತೆ ಘಟಕದಿಂದ ಹೊರಬೀಳುವ ನೀರು ಭೂಮಿಯಲ್ಲಿ ಅಂತರ್ಜಲ ಸೇರಿ ನೀರನ್ನೇ  ಕಲುಷಿತಗೊಳಿಸಿದೆ.   ಹೆಬ್ಬಾಳು ಗ್ರಾಮದ ಗ್ರೀನ್‌ ಆಗ್ರೋ ಪ್ಯಾಕ್‌  ಕಂಪನಿ  ಸಂಸ್ಕರಣ ಘಟಕ ಕಾರ್ಯಾರಂಭಗೊಂಡು ಎರಡೂವರೆ ದಶಕ ಕಳೆದಿದೆ. ಘಟಕದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಂತೆ ಅದರ ವಿಸ್ತಾರವು ಹೆಚ್ಚಾಗಿದೆ..  ಆದ್ರೆ ಅದಕ್ಕೆ  ತಕ್ಕಂತೆ  ತ್ಯಾಜ್ಯ ನೀರಿನ ಸಂಸ್ಕರಣೆ ಆಗುತ್ತಿಲ್ಲ ಎಂಬ ಕೂಗು ರೈತರದು.   

ಹಾಲುವರ್ತಿ ಕೆರೆ ನೀರು ಕೃಷಿ ಬಳಕೆಗೆ ಯೋಗ್ಯವಾಗಿಲ್ಲ ಎಂಬ ತರಳುಬಾಳು ಕೃಷಿ ವಿಜ್ಞಾನ ಕೇಂದ್ರ ನೀಡಿದ ವರದಿ ನೀಡಿದೆ.  ಕಂಪನಿ ನಿರ್ಲಕ್ಷ್ಯ,  ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಫ್ಯಾಕ್ಟರಿ  ಸುತ್ತಮುತ್ತಲಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಸಾಲಸೂಲ ಮಾಡಿ ಕಷ್ಟಪಟ್ಟು ದುಡಿದ್ರೂ, ಹತ್ತಾರು ವರ್ಷದಿಂದ ನಿರೀಕ್ಷಿತ ಆದಾಯ ಪಡೆಯುತ್ತಿಲ್ಲ. ರೈತರ ಸಹನೆ ಕಳೆದುಕೊಂಡು  ಆಕ್ರೋಶ ಕಟ್ಟೆಯೊಡೆಯುವ ಮುನ್ನ  ಕಾರ್ಖಾನೆ ಮಾಲೀಕರು  ಎಚ್ಚೆತ್ತುಕೊಳ್ಳಬೇಕಿದೆ.