Dec 9, 2022, 4:57 PM IST
ಮಂಗಳೂರು: ಕಾಲೇಜಿನ ವಿದ್ಯಾರ್ಥಿ ಘಟಕ ಕಾರ್ಯಕ್ರಮದಲ್ಲಿ ಬುರ್ಕಾ ಧರಿಸಿ ಹಿಂದಿ ಐಟಂ ಸಾಂಗ್‌ಗೆ ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳು ಸ್ಟೆಪ್ ಹಾಕಿದ್ದಾರೆ. ಯುವತಿಯರಂತೆ ಮುಸ್ಲಿಂ ಯುವಕರು ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಸುಧೀರ್ ಆದೇಶ ಹೊರಡಿಸಿದ್ದಾರೆ.