Dec 16, 2019, 1:30 PM IST
ಬೆಂಗಳೂರು [ಡಿ.16]: ಮಕ್ಕಳ ಮುಖದಲ್ಲಿ ಮುಗುಳ್ನಗೆ, ಕಣ್ಣಲ್ಲಿ ಹೊಳೆಯುವ ಮಿಂಚು, ಅವರನ್ನು ನೋಡಿ ಪೋಷಕರ ಮೊಗದಲ್ಲೂ ಸಮಾಧಾನದ ನಿಟ್ಟುಸಿರು. ನಮ್ಮ ಮಕ್ಕಳು ಯಾರಿಗೇನು ಕಮ್ಮಿ ಇಲ್ಲ ಅನ್ನೋ ನೆಮ್ಮದಿಯ ಭಾವ ಇತ್ತು.
ಇಂಥದ್ದೊಂದು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದದ್ದು ಇಂದಿರಾನಗರದಲ್ಲಿ ಇರುವ ಸ್ಪ್ಯಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕ ಸಂಸ್ಥೆಯ ಆವರಣದಲ್ಲಿ ನಡೆದ ವಿಂಟರ್ ಕಾರ್ನಿವಲ್. ಇಲ್ಲಿ ಬೆಂಗಳೂರಿನ ವಿವಿಧ ವಿಶೇಷ ಶಾಲೆಗಳ ವಿಶೇಷ ಚೇತನ ಮಕ್ಕಳು ತಮ್ಮ ಪೋಷಕರೊಂದಿಗೆ ಭಾಗವಹಿಸಿದ್ರು.
ಪತಿಯೊಂದಿಗೆ ಮಗಳ ಫೋಟೋ ರಿವೀಲ್ ಮಾಡಿದ ಶೃತಿ ಹರಿಹರನ್...
ಕಾರ್ಯಕ್ರಮದಲ್ಲಿ ಹಲವು ಮಕ್ಕಳು ಭಾಗವಹಿಸಿದ್ದು, ಇನ್ನೂ ಕೆಲ ಮಕ್ಕಳು ಕುಶಲ ಕಲೆಗಳನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮವು ಸಂಗೀತ, ನೃತ್ಯ, ಹಾಸ್ಯ, ಮ್ಯಾಜಿಕ್, ರಸಪ್ರಶ್ನೆ ಹೀಗೆ ಮಕ್ಕಳ ಸಮಗ್ರ ಕಲಿಕೆಗೆ ಪೂರಕವಾಗಿತ್ತು.