Jul 19, 2020, 2:00 PM IST
ಬೆಂಗಳೂರು(ಜು.19): ಮಹಾಮಾರಿ ಕೊರೋನಾ ವೈರಸ್ ವಿಷಯದಲ್ಲಿ ಜುಲೈ ತಿಂಗಳು ಬಹಳ ಡೇಂಜರ್ ಅಗಿ ಪರಿಣಮಿಸಿದೆ. ಹೌದು, ಜುಲೈ ಮೊದಲು ಒಂದು ಲೆಕ್ಕ, ಜುಲೈನಿಂದ ಮಹಾಲೆಕ್ಕವಾಗಿದೆ. ಇದರಿಂದ ನಗರದ ಜನತೆ ಕಂಗಾಲಾಗಿ ಹೋಗಿದ್ದಾರೆ.
ಲಾಕ್‌ಡೌನ್ ಬ್ರೇಕ್ ಮಾಡಿದ್ರೆ ಹುಷಾರ್: ನಡು ರಸ್ತೆಯಲ್ಲೇ ಸಿಗುತ್ತೆ ಕಪ್ಪೆ ಜಿಗಿತ ಶಿಕ್ಷೆ
ಬೆಂಗಳೂರು ನಗರದಲ್ಲಿ ಮೊದಲ ಕೊರೋನಾ ಪ್ರಕರಣ ದಾಖಲಾಗಿದ್ದು ಮಾರ್ಚ್ 8 ರಂದು, ಮಾರ್ಚ್ 8 ರಿಂದ ಮಾ. 31 ರವರೆಗೆ ಕೇವಲ 386 ಪ್ರಕರಣಗಳು ದೃಢಪಟ್ಟಿದ್ದವು. ಆರಂಭದ 84ದಿನಗಳಲ್ಲಿ 400ರ ಗಡಿಯನ್ನು ದಾಟಿರಲಿಲ್ಲ, ಜೂನ್ 30 ಕ್ಕೆ ಒಟ್ಟು ಪಾಸಿಟಿವ್ 5 ಸಾವಿರ ಗಡಿಯನ್ನೂ ದಾಟಿರಲಿಲ್ಲ, ಆದರೆ, ಜುಲೈನಲ್ಲಿ ಮಾತ್ರ ಕೊರೋನಾ ಪ್ರಕರಣಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.