Feb 14, 2021, 4:57 PM IST
ಚಿಕ್ಕಮಗಳೂರು (ಫೆ. 14): ನಿಶ್ವಿತಾರ್ಥದಲ್ಲಿ ಸಾಮಾನ್ಯವಾಗಿ ಉಂಗುರ ಬದಲಾಯಿಸಿಕೊಳ್ಳುವುದು ವಾಡಿಕೆ. ಇಲ್ಲೊಂದು ಜೋಡಿ ಸ್ವಲ್ಪ ಭಿನ್ನವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉಂಗುರದ ಬದಲು ಭಾರತಮಾತೆಯ ಪೋಟೋ ಅದಲು ಬದಲು ಮಾಡಿಕೊಂಡಿದ್ದಾರೆ.
ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕ್ರಿಸ್ಮಿ' ಜೋಡಿ, ಮೊದಲ ರಿಯಾಕ್ಷನ್ ಇದು
ಇಲ್ಲಿನ ರವೀಶ್ ಪಟೇಲ್ ಹಾಗೂ ವಿದ್ಯಾ ಶ್ರೀ ನಿಶ್ಚಿತಾರ್ಥದಲ್ಲಿ ಭಾರತಮಾತೆಯ ಪೋಟೋ ಅದಲು ಬದಲು ಮಾಡಿಕೊಂಡಿದ್ದಾರೆ. ಇಬ್ಬರೂ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಗಳು. ನಗರದ ಹೊರವಲಯದ ಹಿರೇಮಗಳೂರು ಸಮೀಪ ನಡೆದ ನಿಶ್ಚಿತಾರ್ಥದಲ್ಲಿ ಕುಟುಂಬಸ್ಥರು ಭಾಗಿಯಾಗಿ ಶುಭ ಹಾರೈಸಿದ್ದಾರೆ.