Jun 20, 2022, 3:50 PM IST
ಕೊಡಗು (ಜೂ. 20): ಕೊಡವ ಮೂಲನಿವಾಸಿಗಳ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಡಿಕೇರಿಯಲ್ಲಿ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ಕೂರ್ಗ್ ಹೆರಿಟೇಜ್ ಸೆಂಟರ್ (Coorg Heritage Centre) ಕಟ್ಟಡ. ದೇಶದಲ್ಲಿಯೇ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡಗಿನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕನಸಿನ ಗೋಪುರವೊಂದನ್ನು ನಿರ್ಮಾಣ ಮಾಡಲಿಕ್ಕೆ ಸರ್ಕಾರ ಮುಂದಾಗಿತ್ತು. ಆದ್ರೆ, 10ಕ್ಕೂ ಹೆಚ್ಚು ವರ್ಷ ಕಳೆದರೂ ಈ ಹೆರಿಟೇಜ್ ನ ನಿರ್ಮಾಣ ಕಾರ್ಯ ಮುಗಿಯದೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ.
ಕೊಡಗು: ಕಾಡಾನೆ ಹಾವಳಿ ತಪ್ಪಿಸಲು ಆನೆಗಳಿಗೆ ರೇಡಿಯೋ ಕಾಲರ್
ಇಷ್ಟಕ್ಕೂ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಈ ರೀತಿ ಪಾಳು ಬೀಳಲು ಕಾರಣ ಏನು ಅಂತಾ ನೋಡೋದಾದ್ರೆ ನಮಗೆ ಕೇಳಿಬರೋದು ಕಾಮಗಾರಿಯ ಅವ್ಯವಹಾರ. ಕೊಡವ ಹೆರಿಟೇಜ್ ನಿರ್ಮಾಣದಲ್ಲಿ ಭಾರಿ ಅಕ್ರಮ ಆಗಿದೆಯಂತೆ. ಇದನ್ನ ಈ ಹಿಂದೆ ಖುದ್ದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳ್ತಿದ್ದರು. ಇನ್ನಾದರೂ ಸರ್ಕಾರ ಎಚ್ಚೆತ್ತು ಕಾಮಗಾರಿ ಸಂಪೂರ್ಣಗೊಳಿಸಲಿ ಅಂತ ನಾಗರಿಕರು ಆಗ್ರಹಿಸಿದ್ದಾರೆ.
1.75 ಕೋಟಿ ವೆಚ್ಚದಲ್ಲಿ ಪೂರ್ಣವಾಗಬೇಕಿದ್ದ ಈ ಕಾಮಗಾರಿಗೆ ಇದಾಗಲೇ 2.68 ಕೋಟಿಯಷ್ಟು ವೆಚ್ಚ ಮಾಡಲಾಗಿದೆ. ಆದ್ರೆ, ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದರು ಇಲ್ಲಿ ಕಣ್ಣಿಗೆ ಕಾಣುವ ಯಾವುದೇ ಕೆಲಸ ಆಗಿಲ್ಲ! ಕೊಡಗಿನ ಸಂಸ್ಕೃತಿಯನ್ನ, ಕೊಡಗಿನ ಪ್ರಾಚೀನ ಪರಂಪರೆ ಬಿಂಬಿಸುವ ನಿಟ್ಟಿನಲ್ಲಿ ರೂಪಿಸಲಾದ ಯೋಜನೆ ನುಂಗಣ್ಣರ ಪಾಲಾಗಿದೆ. ಈ ಕಾಮಗಾರಿ ಅವ್ಯವಹಾರ ಸಂಬಂಧ ಇಂಜಿನಿಯರ ಪುರುಷೋತ್ತಮ್ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಜನತೆ ಆಗ್ರಹಿಸುತ್ತಿದ್ದಾರೆ
3 ವರ್ಷವಾದರೂ ಈಡೇರದ ಭರವಸೆ, ಕೊಡಗಿಗೆ ಹೈಟೆಕ್ ಆಸ್ಪತ್ರೆ ಇನ್ನೂ ಮರೀಚಿಕೆ!
ಒಟ್ನಲ್ಲಿ, ದೇವ್ರು ಕೊಟ್ರು ಪೂಜಾರಿ ಕೊಟ್ಟಿಲ್ಲಾ ಎನ್ನುವಂತೆ, ಕೊಡಗಿನ ಸಂಸ್ಕೃತಿ ಬಿಂಬಿಸುವ ಯೋಜನೆ ಹೆಸ್ರಲ್ಲಿ ಈ ಇಂಜಿನಿಯರ್, ಗುತ್ತಿಗೆದಾರರು ಜಿಲ್ಲಾಡಳಿತವನ್ನ ದಿಕ್ಕು ತಪ್ಪಿಸಿದ್ದಾರೆ. ಇನ್ನಾದ್ರೂ ಈ ಯೋಜನೆ ಮುಗಿದು ಸಾರ್ವಜನಿಕರ ಉಪಯೋಗಕ್ಕೆ ಬರಬೇಕಿದೆ.