ಕೇವಲ ಭರವಸೆ, ಒಂದು ರೂ. ಪರಿಹಾರ ಇಲ್ಲ: ಸರ್ಕಾರದ ವಿರುದ್ಧ ಶಾಸಕಿ ಅಂಜಲಿ ನಿಂಬಾಳ್ಕರ್ ಆಕ್ರೋಶ

Jul 13, 2022, 11:43 AM IST

ಬೆಳಗಾವಿ(ಜು.13): ಕಳೆದ ಬಾರಿ ಸುರಿದ ಮಳೆಯಿಂದಾಗಿ ನಷ್ಟ ಉಂಟಾಗಿದ್ದಕ್ಕೆ ನೀಡಿದ ಪರಿಹಾರದಲ್ಲೇ ಒಂದು ರೂಪಾಯಿನೂ ನೀಡಿಲ್ಲ ಅಂತ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಖಾನಾಪುರ ತಾಲೂಕಿನಲ್ಲಿ ಹಲವು ಮನೆಗಳು ಕುಸಿದಿದ್ದವು. ಅರಣ್ಯ ಇಲಾಖೆ ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಸಚಿವರು ಸೇರಿದಂತೆ ಎಲ್ಲರೂ ಕೇವಲ ಭರವಸೆಗಳನ್ನ ಮಾತ್ರ ಕೊಡುತ್ತಿದ್ದಾರೆ ಅಂತ ರಾಜ್ಯ ಸರ್ಕಾರದ ವಿರುದ್ಧ ಶಾಸಕಿ ಅಂಜಲಿ ನಿಂಬಾಳ್ಕರ್‌ ಕಿಡಿಕಾರಿದ್ದಾರೆ. 

ಕಾಪುನಲ್ಲಿ ಕಡಲ್ಕೊರೆತ: ರೆಸಾರ್ಟ್‌ಗೆ ತಡೆಗೋಡೆ, ಬಡವರ ಮನೆಗಳಿಗಿಲ್ಲ ರಕ್ಷಣೆ..!