ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ಇಂದು ಸಿಐಡಿ ವಿಚಾರಣೆಗೆ ಮಾಜಿ ಸಿಎಂ ಹಾಜರ್‌ !

Jun 17, 2024, 11:53 AM IST

ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ(POCSO case) ಸಂಬಂಧಿಸಿದಂತೆ ಇಂದು ಸಿಐಡಿ(CID) ವಿಚಾರಣೆಗೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ(BS Yediyurappa) ಹಾಜರಾಗಲಿದ್ದಾರೆ. ತನಿಖಾಧಿಕಾರಿ ಮುಂದೆ ಬಿಎಸ್‌ವೈ ಹಾಜರಾಗಲಿದ್ದು, 3 ತಿಂಗಳ ಬಳಿಕ ವಿಚಾರಣೆ ಎದುರಿಸುತ್ತಿದ್ದಾರೆ. ಸಿಐಡಿ ADGP ಬಿ.ಕೆ ಸಿಂಗ್, DySP, ತನಿಖಾಧಿಕಾರಿ ಪೃಥ್ವಿಯವರಿಂದ BSY ವಿಚಾರಣೆ ನಡೆಯಲಿದೆ. ಈಗಾಗಲೇ ಸಿಐಡಿ ಅಧಿಕಾರಿಗಳು ಧ್ವನಿ ಮಾದರಿಯನ್ನು ಸಂಗ್ರಹಿಸಿ ಕಳುಹಿಸಿದ್ದಾರೆ. ಐದು ದಿನ ಕಾಲಾವಕಾಶವನ್ನು ಕೋರಿ ಯಡಿಯೂರಪ್ಪ ಮನವಿ ಮಾಡಿದ್ದರು. ಈಗಾಗಲೇ ಸಿಐಡಿ ಯಡಿಯೂರಪ್ಪ ಅವರ ವಿಚಾರಣೆಯನ್ನು ನಡೆಸಿದೆ.

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ನಿವಾಸದಲ್ಲಿ ಮಹಜರು ನಡೆಸಿದ ಖಾಕಿ!