Chikkamagaluru: 4266 ಎಕರೆ ಅಮೃತ ಮಹಲ್ ಕಾವಲು ಒತ್ತುವರಿ, ಗಾಢನಿದ್ದೆಯಲ್ಲಿದೆ ಜಿಲ್ಲಾಡಳಿತ

Mar 2, 2022, 3:19 PM IST

ಚಿಕ್ಕಮಗಳೂರು (ಮಾ. 02):  ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿರೋ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ. ಈ ಕೇಂದ್ರ ಸೇರಿದಂತೆ ಒಟ್ಟು ಅಮೃತ್ ಮಹಲ್ ಗೆ 13 ಕಾವಲುಗಳಿದ್ದು ಒಟ್ಟು 14339 ಎಕ್ರೆ ಜಮೀನು ಹೊಂದಿದೆ. 500 ವರ್ಷಕ್ಕೂ ಅಧಿಕ ವರ್ಷಗಳ ಇತಿಹಾಸವಿರೋ ಕಾವಲ್  ಇದಾಗಿದ್ದು,  ಇಲ್ಲಿ ಗೋವುಗಳ ಸಂತತಿ, ಕೃಷ್ಣಮೃಗಗಳ  ಅವಾಸಸ್ಥಾನ. ಪ್ರಾಣಿಗಳ ಸ್ವಚ್ಛಂದ ಓಡಾಟಕ್ಕೆ ಇಲ್ಲಿ ಅಧಿಕಾರಿಗಳ ಬ್ರೇಕ್ ಹಾಕಿದ್ದಾರೆ. ಅಧಿಕಾರಿಗಳ ಜಾಣ ಕುರುಡುತನದಿಂದ ಸಾವಿರಾರು ಎಕರೆ ಕಣ್ಣೆದುರು ಒತ್ತುವರಿಯಾಗಿದ್ದರೂ ಗಾಢ ನಿದ್ದೆಗೆ ಜಾರಿದ್ದಾರೆ.ಒತ್ತುವರಿ ತೆರೆವಿಗೆ ಕೋರ್ಟ್ ನಿಂದ ಸೂಚನೆ ನೀಡಿದ್ರು ಯಾವುದೇ ಪ್ರಯೋಜನ ಆಗಿಲ್ಲ

ಅಮೃತ್ ಮಹಲ್ ಅಭಿವೃದ್ದಿಗಾಗಿ ಸರ್ಕಾರ ಪಶುಪಾಲನಾ ಇಲಾಖೆಯನ್ನೇ ಸ್ಥಾಪನೆ ಮಾಡಿತ್ತು. ಕಾವಲ್ ಅಭಿವೃದ್ದಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ, ಕಾವಲ್‌ನಲ್ಲಿ ನಿರಂತವಾಗಿ ನಡೆಯುತ್ತಿರುವ ಒತ್ತುವರಿ ಪರಿಣಾಮ ಪ್ರಾಣಿಗಳ ಸ್ವಚ್ಛಂದ ಓಡಾಟ ಸೇರಿದಂತೆ ಮೇವಿಲ್ಲದೇ ದಷ್ಟಪುಷ್ಟವಾಗಿದ್ದ ಗೋವುಗಳೆಲ್ಲವೂ ಈಗ ಬಡಕಲಾಗಿವೆ.

ಅಜ್ಜಂಪುರ ಕೇಂದ್ರ ಮತ್ತು ಉಪಕೇಂದ್ರದಲ್ಲಿ ಒಟ್ಟು 1819 ರಾಸುಗಳಿವೆ. ಅಜ್ಜಂಪುರದಲ್ಲಿ 275, ಹಬ್ಬನಘಟ್ಟ 351, ಬಾಸೂರು 220, ಲಿಂಗದಳ್ಳಿ 320, ಚಿಕ್ಕೆಮ್ಮಿಗನೂರು 263, ರಾಮಗಿರಿ 197 ಹಾಗೂ ಬೀರೂರು ಕಾವಲಿನಲ್ಲಿ 193 ರಾಸುಗಳಿವೆ. ಅಜ್ಜಂಪುರ ಕಾವಲಿನಲ್ಲಿ 495 ರಾಸುಗಳಿವೆ.

Chikkamagaluru: ಅಂಗನವಾಡಿಯಲ್ಲಿ ಭ್ರಷ್ಟಾಚಾರದ ವಾಸನೆ..!

ರಾಜ್ಯದ ಆರು ಜಿಲ್ಲೆಗಳಲ್ಲಿ ಅಮೃತ್ ಮಹಲ್ ಕಾವಲ್‌ಗಳಿವೆ. ಇದರಲ್ಲಿ ಚಿಕ್ಕಮಗಳೂರಿನ ಅಜ್ಜಂಪುರ, ಬಾಸೂರು ಕಾವಲ್  ,ಲಿಂಗದಹಳ್ಳಿ ಕಾವಲ್ ಗಳು ಸೇರಿದಂತೆ ಒಟ್ಟು 13 ಕಾವಲ್ ನಿಂದ 14339 ಎಕ್ರೆ ಪ್ರದೇಶ ಇಂದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒತ್ತುವರಿ ಸಮಸ್ಯೆಯನ್ನು ಎದುರಿಸುತ್ತಿದೆ. 4266 ಎಕ್ರೆ ಅಮೃತ ಮಹಲ್ ಕಾವಲು ಒತ್ತುವರಿಯಾಗಿದ್ದು ತೆರೆವುಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಹೈಕೋರ್ಟ್ ಒತ್ತುವರಿ ತೆರೆವಿಗೆ ಸೂಚನೆ ನೀಡಿದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ.  ಪಶುಪಾಲನಾ ಇಲಾಖೆ ಅಧಿಕಾರಿಗಳ ಕಣ್ಣೆದುರಿಗೆ ಸಾವಿರಾರು ಎಕ್ರೆ ಒತ್ತುವರಿಯಾಗಿದ್ದರೂ ಅಧಿಕಾರಿಗಳು ಗಾಢನಿದ್ರೆಯಲ್ಲಿ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ನೂರಾರು ರಾಸುಗಳಿಗೆ, ಪ್ರಾಣಿ ,ಪಕ್ಷಿಗಳಿಗೆ  ಮೇವು ನೀಡುವ ಕಾವಲಿನಲ್ಲಿ ರಾಶಿ ರಾಶಿಯಾಗಿ ಜಾಲಿ ಮರಗಳು ಬೆಳೆದು ನಿಂತಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಹಿಡಿದ ಕೈ ಕನ್ನಡಿಯಾಗಿದೆ ಎಂದು ರೈತರು ಆಕ್ರೋಶವನ್ನು ಹೊರಹಾಕಿದ್ದಾರೆ.