ಚನ್ನಗಿರಿಯ ಪಿಯು ಕಾಲೇಜಿನಲ್ಲಿ ಇಲ್ಲ ಶೌಚಾಲಯ: ಬಯಲೇ ವಿದ್ಯಾರ್ಥಿಗಳಿಗೆ ಗತಿ

Nov 21, 2022, 3:36 PM IST

ದಾವಣಗೆರೆ:ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೇ ಕ್ಯಾಂಪಸ್'ಗೆ ಹೊಂದಿಕೊಂಡು ಒಂದು ಹೈಸ್ಕೂಲ್ ಸಹ ಇದ್ದು, ಹೈಸ್ಕೂಲ್ ಹಾಗೂ ಕಾಲೇಜು ಸೇರಿ 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಆದರೆ ಇಲ್ಲಿ ಸುಸಜ್ಜಿತ ಶೌಚಾಲಯವಿಲ್ಲ.
ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಬಯಲು  ಶೌಚಾಲಯವೇ ಗತಿ ಆಗಿದೆ. ಪುಣ್ಯಕ್ಕೆ ಹುಡುಗಿರಯರಿಗೆ ಸಮಸ್ಯೆ ಆಗಬಾರದು ಎಂದು ಕಾಲೇಜ್ ಕ್ಯಾಂಪಸ್'ನಲ್ಲಿ ಶೌಚಾಲಯದ ವ್ಯವಸ್ಥೆ ಮಾಡಿ ಹುಡುರನ್ನು ಬೀದಿಗೆ ಬಿಟ್ಟಿದ್ದಾರೆ. ವಿದ್ಯಾರ್ಥಿಗಳ ಪರದಾಟ ನೋಡಿ ಸಾರ್ವಜನಿಕರೇ ಬೇಸತ್ತಿದ್ದು, ಯಾವತ್ತು ಈ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಮುಕ್ತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದಾರೆ.

ಉಗ್ರ ಚಟುವಟಿಕೆ ನಡೆಸುವವರಿಗೆ ಗುಂಡು ಹೊಡೆಯಬೇಕು: ಕೆ.ಎಸ್.ಈಶ್ವರಪ್ಪ