Feb 4, 2022, 8:04 PM IST
ರಾಮನಗರ( ಫೆ. 04) ರಾಮನಗರ (Ramanagara) ಜಿಲ್ಲಾಧಿಕಾರಿ (DC) ಕಚೇರಿಯಲ್ಲಿ ಬೆಕ್ಕಿನ (Cat) ಕಾಟ! ಇದು ಒಂದು ಸುದ್ದಿಯಾ ಎಂದು ಅಚ್ಚರಿ ಪಡಬಹುದು ಆದರೆ ಸಭೆಯ ನಡುವೆ ಬೆಕ್ಕು ಕೊಟ್ಟ ಕಾಟ ಅಷ್ಟಿಷ್ಟಲ್ಲ.
Cat Missed: ಪರ್ಷಿಯನ್ ಬೆಕ್ಕು ಕಳ್ಳತನ, ಹುಡುಕಿ ಕೊಟ್ಟವರಿಗೆ ಬಂಪರ್ ನಗದು ಬಹುಮಾನ
ಸಚಿವ ಆಚಾರ್ ಹಾಲಪ್ಪ ಅಧಿಕಾರಿಗಳ ಸಭೆ ನಡೆಸುವಾಗ ಸಭೆ ಮಧ್ಯೆ ಬಂದ ಬೆಕ್ಕು ಸರಿಯಾಗಿ ಕಾಟ ಕೊಟ್ಟಿದೆ. ಅಧಿಕಾರಿಗಳಂತೆ ಕೂತು ಸಭೆಯಲ್ಲಿನ ಚರ್ಚೆಯಲ್ಲಿ ಪಾಲ್ಗೊಂಡಿದೆ ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಸಭೆ ನಡೆಯುತ್ತಿದ್ದ ವೇಳೆ ಬೆಕ್ಕು ರಂಪಾಟ ನಡೆಸಿದೆ. ಭೆ ನಡೆಯುವಾಗಲೇ ಸುಮಾರು ಒಂದು ಗಂಟೆ ಸಭೆ ಮಧ್ಯೆಯೇ ಬೆಕ್ಕ ಓಡಾಟ ಮಾಡಿದ್ದು ಬೆಕ್ಕು ಓಡಿಸಲು ಸಿಬ್ಬಂದಿ ಹರಸಾಹಸ ಮಾಡಿದ ದೃಶ್ಯವೂ ಕಂಡು ಬಂತು.