BIG 3: ಬಾಗಲಕೋಟೆಯ ಬಾದಾಮಿಯಲ್ಲಿ ಕುರಿ-ಕೋಳಿ, ಜಾನುವಾರು ಸಾಕೋ ಶೆಡ್‌ನಲ್ಲಿ ಮಕ್ಕಳಿಗೆ ಶಿಕ್ಷಣ!

Jun 9, 2022, 5:10 PM IST

ಬಾಗಲಕೋಟೆ (ಜೂ. 09): ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕ್ಷೇತ್ರವಾಗಿರುವ ಬಾಗಲಕೋಟೆಯ ಬಾದಾಮಿಯ ತಳಕವಾಡ ಗ್ರಾಮದ ಶಾಲೆ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಪ್ರವಾಹಕ್ಕೆ ತುತ್ತಾಗಿ ಶಾಲೆಯ ಗೋಡೆ ಬಿದ್ದಿತ್ತು, ಆದರೆ ಇವರೆಗೂ ಯಾವೊಬ್ಬ ಅಧಿಕಾರಿಯೂ  ಇತ್ತ ತಲೆಹಾಕಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಕುರಿ, ಕೋಳಿ ಹಾಗೂ ಜಾನುವಾರು ಸಾಕುವ ಶೆಡ್ಡಿಮಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಶೆಡ್ಡಿನಲ್ಲಿ ಪಾಠ ಕಲಿಯುತ್ತಿರುವ ಇಲ್ಲಿನ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದು ಶಾಲಾ ಕಟ್ಟಡವನ್ನು ಸರಿ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ನೋಡಿ: BIG 3: ಜಮೀನುಗಳಲ್ಲಿ ವಾಲಿದ ವಿದ್ಯುತ್‌ ಕಂಬಗಳು, ಜೀವಭಯದಲ್ಲಿ ಅನ್ನದಾತ..!

"ತಗಡಿನ ಶೆಡ್ಡಿನಲ್ಲಿ ಕುಳಿತುಕೊಳ್ಳುತ್ತೇವೆ, ತುಂಬಾ ಸೆಕೆಯಾಗುತ್ತೆ. ಶೆಡ್ಡಿನ ಮೇಲೆ ಮರಗಿಡಗಳು ಬೀಳುತ್ತವೆ, ಇದಕ್ಕೊಂದು ವ್ಯವಸ್ಥೆ ಮಾಡಿಸಿ" ಎಂದು ವಿದ್ಯಾರ್ಥಿನಿಯೊಬ್ಬರು ಆಗ್ರಹಿಸಿದ್ದಾರೆ.  ಇನ್ನು "ಸಮಸ್ಯೆ ಬಗೆಹರಿಸುವಂತೆ ಶಾಸಕರು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ, ಆದರೇ ಯಾರೂ ಇದಕ್ಕೆ ಸ್ಪಂದಿಸಿಲ್ಲ, ತಗಡಿನ ಶೀಟು ಇರುವುದರಿಂದ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ" ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.