Dec 4, 2021, 2:22 PM IST
ಬೆಳಗಾವಿ(ಡಿ.04): ಅಕ್ಟೋಬರ್ ಒಂದೇ ತಿಂಗಳಲ್ಲಿ ಸುಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ 1.20 ಕೋಟಿ ಸಂಗ್ರಹವಾಗಿದೆ. ಹೌದು, ಒಂದೂವರೆ ವರ್ಷದ ಬಳಿಕ ಯಲ್ಲಮ್ಮ ದೇವಿ ದೇವಸ್ಥಾನ ಓಪನ್ ಆಗಿದೆ. ಅಕ್ಟೋಬರ್ ತಿಂಗಳಲ್ಲಿ 15 ಲಕ್ಷ ಮೌಲ್ಯದ ಚಿನ್ನ, 2 ಲಕ್ಷ ಮೌಲ್ಯದ ಬೆಳ್ಳಿಯನ್ನು ಕಾಣಿಕೆಯಾಗಿ ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ. ಈ ಹಿಂದೆ ವರ್ಷಕ್ಕೆ ಸರಾಸರಿ 4 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಇದೇ ಮೊದಲ ಬಾರಿಗೆ ದಾಖಲೆ ಮೊತ್ತ ಸಂಗ್ರಹವಾಗಿದೆ.
Chikkamagalur Tourism: ಎತ್ತಿನ ಭುಜಕ್ಕೆ ಹೋಗುವ ಪ್ರವಾಸಿರಿಗೆ ಶಾಕ್..!
ಒಂದೂವರೆ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ದೇಗುಲ ಬಂದ್ ಆಗಿದ್ದರಿಂದ ಆದಾಯ ಬಂದಿರಲಿಲ್ಲ. ಬುಧವಾರ ಮತ್ತು ಗುರುವಾರ ದೇವಸ್ಥಾನದ 85 ಸಿಬ್ಬಂದಿ, ಸಿಂಡಿಕೇಟ್ ಬ್ಯಾಂಕ್‌ನ 10 ಸಿಬ್ಬಂದಿಯಿಂದ ಎಣಿಕೆ ಕಾರ್ಯ ನಡೆದಿತ್ತು. ದೇವಸ್ಥಾನ ವ್ಯವಸ್ಥಾಪಕ ಸಮಿತಿ, ಡಿಸಿ ಕಚೇರಿ, ಧಾರ್ಮಿಕ ದತ್ತಿ ಇಲಾಖೆ, ತಹಶಿಲ್ದಾರ್ ಕಚೇರಿ, ಸವದತ್ತಿ ಪೊಲೀಸ್ ಠಾಣೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿತ್ತು. ಹುಂಡಿಯಲ್ಲಿ ಅಮಾನ್ಯವಾದ 500 ರೂ.,1000 ರೂ. ಮುಖಬೆಲೆಯ ನೋಟುಗಳನ್ನೂ ಕೆಲ ಭಕ್ತರು ಹಾಕಿದ್ದಾರೆ.