ಭಾನುವಾರ ಕರ್ಫ್ಯೂ: ಕುಂದಾನಗರಿ ಬೆಳಗಾವಿ ಸಿಟಿ ಬಂದ್‌

May 24, 2020, 12:31 PM IST

ಬೆಳಗಾವಿ(ಮೇ.24): ರಾಜ್ಯ ಸರ್ಕಾರ ಭಾನುವಾರ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಇಂದು(ಭಾನುವಾರ) ಬೆಳಿಗ್ಗೆಯಿಂದ ಕರ್ಫ್ಯೂ ಜಾರಿಯಲ್ಲಿದೆ. ಜನರು ಮನೆ ಬಿಟ್ಟು ಹೊರಗಡೆ ಬರದಿರಲು ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ. ಹೀಗಾಗಿ ಜನರು ಮನೆ ಬಿಟ್ಟು ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ. 

ಕರ್ಫ್ಯೂ ಜಾರಿ: ಮನೆಯಿಂದ ಹೊರ ಬರದ ಜನ, ರಾಯಚೂರು ಕಂಪ್ಲೀಟ್‌ ಲಾಕ್‌..!

ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ಲಾಕ್‌ ಮಾಡಲಾಗಿದೆ. ತರಕಾರಿ, ಹಾಲು, ಔಷಧಿ ಅಂಗಡಿ ಮಾತ್ರ ಓಪನ್‌ ಆಗಿವೆ. ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅನಗತ್ಯವಾಗಿ ಹೊರಗಡೆ ಬಂದರೆ ಅವರನ್ನ ಪೊಲೀಸರು ವಾಪಸ್‌ ಕಳುಹಿಸುತ್ತಿದ್ದಾರೆ.