Chikkamagaluru: ಭಿಕ್ಷೆ ಬೇಡಿ ಕೂಡಿಟ್ಟ ಹಣವನ್ನ ದೇವಸ್ಥಾನಕ್ಕೆ ದಾನ ಮಾಡಿದ ಅಜ್ಯಮ್ಮ..!

Dec 1, 2021, 3:49 PM IST

ಚಿಕ್ಕಮಗಳೂರು (ಡಿ. 01): ಕಡೂರು  (Kadur) ಪಟ್ಟಣದ ಕೋಟೆ ಪಾತಾಳಾಂಜನೇಯ ಸ್ವಾಮಿ (Anjaneya Swamy) ದೇಗುಲದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು. ಈ ವೇಳೆ 80 ವರ್ಷದ ಭಿಕ್ಷುಕಿಯೊಬ್ಬರು ದೇವಸ್ಥಾನಕ್ಕೆ 20 ಸಾವಿರ ದೇಣಿಗೆ ನೀಡಿ ಎಲ್ಲರ ಗಮನ ಸೆಳೆದಿದ್ದಾಳೆ. ದೇವಸ್ಥಾನಕ್ಕೆ ದೇಣಿಗೆ (Donation) ನೀಡಿದ 80ರ ಭಿಕ್ಷುಕಿ ಹೆಸರು ಕೆಂಪಜ್ಜಿ.  ಕಡೂರು ಪಟ್ಟಣದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ವೃದ್ಧೆ. ಆಂಜನೇಯ ಸ್ವಾಮಿಯ ದೇಗುಲದ ಕಾರ್ಯಕ್ರಮದ ವೇಳೆ, ಹೊರಗೆ ಕುಳಿತಿದ್ದ ಅಜ್ಜಿ ಹೋಗಿ-ಬರುವವರನ್ನೆಲ್ಲಾ ಅಧ್ಯಕ್ಷರು ಎಲ್ಲಿ ಎಂದು ಕೇಳುತ್ತಿದ್ದಳು. 

Mysuru: ಪುನೀತ್ ಪುಣ್ಯಸ್ಮರಣೆಗೆ ಹೋದ ಅಭಿಮಾನಿ ನಾಪತ್ತೆ, ಮಗನನ್ನು ಹುಡುಕಿಕೊಡಿ ಎಂದು ತಾಯಿ ಕಣ್ಣೀರು

ಹಣ ಕೇಳಲು ಎಂದೇ ತಿಳಿದು ಎಲ್ಲರೂ ವೃದ್ಧೆಯನ್ನು ದೂರ ಹೋಗಲು ಹೇಳುತ್ತಿದ್ದರು. ಆದರೆ, ಆ ಭಿಕ್ಷುಕಿ ನೇರವಾಗಿ ದೇಗುಲದೊಳಗೆ ಹೋಗಿ ಅಲ್ಲಿದ್ದ ದತ್ತ ವಾಸುದೇವ ಸ್ವಾಮೀಜಿಗೆ 500 ಮುಖಬೆಲೆಯ 20 ನೋಟುಗಳನ್ನು ಕಾಣಿಕೆ ಎಂದು ನೀಡಿದಾಗ ಎಲ್ಲರಿಗೂ ಆಶ್ಚರ್ಯಚಕಿತ ರಾಗಿ ಮೂಕವಿಸ್ಮಿತರಾಗಿ ನಿಂತರು. ಭಿಕ್ಷುಕಿ ಕೆಂಪಜ್ಜಿಯ ದೊಡ್ಡತನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಕೈಯಲ್ಲಿ ಎಷ್ಟು ಆಯ್ತೋ ಆಷ್ಟು ಪರಮಾತ್ಮನಿಗೆ ಕೊಟ್ಟಿದ್ದೀನಿ, ಸ್ವಾಮಿಗೆ ದುಡ್ಡು ಕೊಡಬೇಕೆಂದು ಮನಸ್ಸಾಯ್ತು, ಹಾಗಾಗಿ ಪರಮಾತ್ಮನಿಗೆ ನನ್ನ ಅಳಿಲು ಸೇವೆ ಮಾಡಿದ್ದೀನಿ, ನನ್ನ ಆತ್ಮ ಹೇಳ್ತು ಹಾಗಾಗಿ ಹಣ ಕೊಟ್ಟಿದ್ದೀನಿ ನಾನು ಸಾಯದೇ ಬದುಕಿದ್ದರೆ ಸ್ವಾಮಿ ಗೆ ಮತ್ತೊಂದು ಬೆಳ್ಳಿ ಛತ್ರಿ ಮಾಡಿಸುತ್ತೇನೆ ಅಂದಿದ್ದಾಳೆ ಅಜ್ಯಮ್ಮ.