May 27, 2020, 9:39 PM IST
ಬೆಂಗಳೂರು(ಮೇ 27): ರಾಮನಗರದಲ್ಲಿ ಕರಡಿ ಹಾವಳಿ ಹೆಚ್ಚಾಗಿದೆ. ಮಾಜಿ ನಗರಸಭಾ ಉಪಾಧ್ಯಕ್ಷೆ ಸಾಕಮ್ಮ ಮೇಲೆ ಕರಡಿ ದಾಳಿ ಮಾಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಹುಲಿ, ಚಿರತೆ ದಾಳಿಯ ಬಗ್ಗೆ ಸುದ್ದಿ ಕೇಳಿ ಬರುತ್ತಿದ್ದರೆ ರಾಮನಗರದಲ್ಲಿ ಕರಡಿ ದಾಳಿ ಹೆಚ್ಚಾಗುತ್ತಲೇ ಇದೆ.
ಲಾಕ್‌ಡೌನ್: 300ರಷ್ಟು ಪ್ರೀ ಸ್ಕೂಲ್ ಕ್ಲೋಸ್, ಇನ್ನು ಕೆಲವು ಮಾರಾಟಕ್ಕೆ..!
ಮುಂಜಾನೆ ಮನೆಯಿಂದ ಹೊರ ಬರುತ್ತಿದ್ದಂತೆಯೇ ಕರಡಿ ದಾಳಿ ಮಾಡಿದೆ. ಸಾಕಮ್ಮ ಅವರ ಮುಖಕ್ಕೆ ಕಚ್ಚಿ ಗಾಯ ಮಾಡಿ ಕೊಂದು ಹಾಕಿದೆ. ಕರಡಿ ಓಡಾಡುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.