ಬಾಗಲಕೋಟೆ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯ್ತು ಮಹಾಯಾಗ ಹೋಮ

Sep 5, 2021, 10:53 AM IST

ಬಾಗಲಕೋಟೆ (ಸೆ. 05): ಮಹಾಮಾರಿ ಕೊರೋನಾ ಸೇರಿದಂತೆ ಜಗತ್ತಿನ ಹಲವು ಸಂಕಷ್ಟಗಳು ಇಂದು ಎದುರಾಗಿರೋ ಬೆನ್ನಲ್ಲೆ ಇವುಗಳ ನಿಗ್ರಹಕ್ಕಾಗಿ ಶಿವಶಕ್ತಿ ಮಹಾಯಜ್ಞವೊಂದನ್ನ ಹಮ್ಮಿಕೊಳ್ಳಲಾಗಿದೆ. ಈ ಶಿವಶಕ್ತಿ ಯಾಗದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸ್ವಾಮೀಜಗಳು ಆಗಮಿಸಿದ್ದು, ಹೋಮ ಹವನದಲ್ಲಿ ಪಾಲ್ಗೊಂಡು ಲೋಕಕಲ್ಯಾಣಾರ್ಥ ಶಿವಶಕ್ತಿ ಮಹಾಯಜ್ಞ ನಡೆಸಿದರು.

ಗಣೇಶ ವಿಗ್ರಹದ ಅಳತೆಗೂ, ಕೊರೋನಾಕ್ಕೂ ಏನ್ ಸಂಬಂಧ? ತಯಾರಕರ ಗೋಳು

ವಿಶೇಷವೆಂದರೆ ಮುಸ್ಲಿಂ ಸಮುದಾಯದ ಮುಖಂಡರು ಸಹ ಶಿವಶಕ್ತಿ ಮಹಾಯಜ್ಞ ನಡೆದ ಸ್ಥಳಕ್ಕೆ ಆಗಮಿಸಿ ಸ್ವಾಮೀಜಿಗಳನ್ನ ಅಭಿನಂದಿಸಿ ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆದರು. ಇಂತಹವೊಂದು ಲೋಕಕಲ್ಯಾಣಾರ್ಥ ಶಿವಶಕ್ತಿ ಮಹಾಯಜ್ಞ ನಡೆದಿದ್ದು ಬಾಗಲಕೋಟೆ ಜಿಲ್ಲೆಯ ಇಲಕಲ್​ ಪಟ್ಟಣದಲ್ಲಿ. ತದನಂತರ ಹೋಮ ಕುಂಡದ ಸ್ಥಳವನ್ನು ಪ್ರದಕ್ಷಿಣೆ ಹಾಕಿ ನೆರೆದಿದ್ದ ಸ್ವಾಮೀಜಿಗಳನ್ನು ಸತ್ಕರಿಸಿ ಭಾವೈಕ್ಯತೆ ಮೆರೆದರು. ಇನ್ನು ಯಾಗಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನ ಕಲ್ಪಿಸಲಾಗಿತ್ತು.