ಬಾಗಲಕೋಟೆ  ಒತ್ತುವರಿ ತೆರವಿಗೆ ನಲುಗಿದ ಮಲಪ್ರಭೆ, ಕಣ್ತೆರೆಯಬೇಕಿದೆ ಸರ್ಕಾರ

ಬಾಗಲಕೋಟೆ ಒತ್ತುವರಿ ತೆರವಿಗೆ ನಲುಗಿದ ಮಲಪ್ರಭೆ, ಕಣ್ತೆರೆಯಬೇಕಿದೆ ಸರ್ಕಾರ

Published : May 23, 2022, 02:26 PM IST

ಉತ್ತರ ಕರ್ನಾಟಕದ ಜೀವನದಿಗಳಲ್ಲೊಂದಾಗಿರೋ ಮಲಪ್ರಭಾ ನದಿಗೆ ಪ್ರತಿವರ್ಷ ಪ್ರವಾಹ ಬರುತ್ತಿರೋ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಮಲಪ್ರಭಾ ನದಿಯ ಇಕ್ಕೆಲಗಳ ಒತ್ತುವರಿ ತೆರವಿಗೆ ಕೂಗು ಕೇಳಿ ಬರ್ತಿದೆ. 

ಬಾಗಲಕೋಟೆ (ಮೇ. 23): ಉತ್ತರ ಕರ್ನಾಟಕದ ಜೀವನದಿಗಳಲ್ಲೊಂದಾಗಿರೋ ಮಲಪ್ರಭಾ ನದಿಗೆ ಪ್ರತಿವರ್ಷ ಪ್ರವಾಹ ಬರುತ್ತಿರೋ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಮಲಪ್ರಭಾ ನದಿಯ ಇಕ್ಕೆಲಗಳ ಒತ್ತುವರಿ ತೆರವಿಗೆ ಕೂಗು ಕೇಳಿ ಬರ್ತಿದೆ. ಈ ಮಧ್ಯೆ ಪ್ರತಿವರ್ಷ ಪ್ರವಾಹ ಭೀತಿ ಒಂದೆಡೆಯಾದ್ರೆ ಮತ್ತೊಂದೆಡೆ ಕಳಸಾ ಬಂಡೂರಿ ತಿರುವು ಯೋಜನೆ ಅನುಷ್ಠಾನ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಎಚ್ಚರಿಕೆ ಹೆಜ್ಜೆ ಇಡಬೇಕಿದೆ. 

 2009 ರಿಂದ ಹಿಡಿದು ಆಗಾಗ ಈಚೆಗೆ ಸತತವಾಗಿ ಬಹುತೇಕ ಪ್ರವಾಹದ ಎಫೆಕ್ಟ್ ಜೋರಾಗ್ತಿರೋದ್ರಿಂದ ಇದೀಗ ರಾಜ್ಯ ಸಕಾ೯ರಕ್ಕೂ ತಲೆನೋವಾಗಿ ಪರಿಣಮಿಸಿದೆ. ಹೀಗೆ ಪದೇ ಪದೇ ಪ್ರವಾಹಕ್ಕೆ ಕಾರಣವೇನು ಎಂದು ನೋಡಿದಾಗ ನದಿಯಲ್ಲಿ ಹೂಳಿರುವುದು ಮತ್ತು ನದಿಯ ಇಕ್ಕೆಲಗಳಲ್ಲಿ ಒತ್ತುವರಿ ಮಾಡಿದ್ದೇ ಮೂಲ ಕಾರಣ ಅಂತ ಗೊತ್ತಾಗಿದ್ದು, ಈ ಹಿನ್ನೆಲೆಯಲ್ಲಿ ಸಕಾ೯ರ ನದಿಯ ಅಕ್ಕಪಕ್ಕದ ಅತಿಕ್ರಮಣ ತೆರವು ಕಾಯ೯ ನಡೆಸಲು ಮುಂದಾಗಬೇಕಿದೆ. ಆದ್ರೆ ಆ ಕೆಲಸ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಒತ್ತುವರಿಗೆ ತೆರವಿಗೆ ಮುಂದಾಗಬೇಕು ಇಲ್ಲವಾದಲ್ಲಿ ಮತ್ತೇ ಪ್ರವಾಹ ಬಂದಲ್ಲಿ ಇನ್ನಷ್ಟು ಬೆಲೆ ತೆರಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.  

ಇನ್ನು ಬೆಳಗಾವಿ ಜಿಲ್ಲೆಯ ಖಾನಾಪೂರ ದ ಕನಕುಂಬಿಯಲ್ಲಿ ಹುಟ್ಟುವ ಮಲಪ್ರಭಾ ನದಿಯು ಮುಂದೆ ಮುನವಳ್ಳಿ , ಗದಗ ಜಿಲ್ಲೆಯ ಕೊಣ್ಣೂರ ಭಾಗವನ್ನ ದಾಟಿ ನಂತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿ , ಕಮತಗಿ ಮಾರ್ಗವಾಗಿ ಕೂಡಲಸಂಗಮ ಸೇರುತ್ತದೆ. ಹೀಗಾಗಿ  ಮಲಪ್ರಭಾ ನದಿಯು ಬಾಗಲಕೋಟೆ, ಬೆಳಗಾವಿ, ಗದಗ ಸೇರಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಂದಾಜು 360 ಕಿಮೀಗೂ ಅಧಿಕ ಉದ್ದವನ್ನು ಹೊಂದಿದ್ದು, ಈ ನದಿ ಪಾತ್ರದಲ್ಲಿ ಸಾವಿರಾರು ಕಿಮೀ ಒತ್ತುವರಿ ಯಾಗಿದೆ. ಕಳೆದ 40 ವರ್ಷಗಳ ಹಿಂದೆ 1980ರಲ್ಲಿಯೇ ರಾಮದುರ್ಗದ ನಿವಾಸಿ ಮಾರುತಿ ಚಂದರಗಿ ನಾಗರಿಕ ವೇದಿಕೆಯನ್ನು ಕಟ್ಟಿಕೊಂಡು ಮಲಪ್ರಭೆ ಸ್ವಚ್ಚತೆ ಮತ್ತು ಒತ್ತುವರಿ ತೆರವಿಗೆ ಇನ್ನಿಲ್ಲದ ಹೋರಾಟ ಮಾಡುತ್ತಲೇ ಬಂದಿದ್ರು. ಬಳಿಕ ಸೂರೇಬಾನ ಗ್ರಾಮದ ಪೂರ್ಣಿಮಾ ಗೌರೋಜಿ ನ್ಯಾಯಾಲಯದ ಮೆಟ್ಟಿಲು ಏರಿದ್ರು. ಹೀಗೆ ಸತತವಾಗಿ ಹೋರಾಟದ ಮಧ್ಯೆ ಇಂದು ನಿರಂತರ ಮಲಪ್ರಭಾ ನದಿಯ ಪ್ರವಾಹ ಸರ್ಕಾರವನ್ನು ಕಂಗೆಡುವಂತೆ ಮಾಡಿದ್ದು, ಆದ್ದರಿಂದ ಸರ್ಕಾರವೇ ಇದೀಗ ನದಿಯ ಹೂಳು ತೆಗೆಯುವುದು ಸೇರಿದಂತೆ ಒತ್ತುವರಿ ತೆರವು ನಡೆಸಲು ಮುಂದಾಗಬೇಕಿದೆ ಅಂತಾರೆ ಸಾರ್ವಜನಿಕರು. 
                                 

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more