Aug 7, 2023, 1:34 PM IST
ವಿಜಯಪುರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸ್ರಲ್ಲಿರೋ ಭವ್ಯವಾದ ಜಿಲ್ಲಾ ಕ್ರೀಡಾಂಗಣವನ್ನ ಇಲ್ಲಿನ ಕ್ರೀಡಾ ಅಧಿಕಾರಿಗಳು ಕತ್ತಲಲ್ಲಿ ಮುಳುಗಿಸಿ ಬಿಟ್ಟಿದ್ರು. ನಿತ್ಯ ಸಂಜೆ ಮೇಲೆ ಪ್ರಾಕ್ಟಿಸ್ಗೆ ಬರೋ ಅಥ್ಲೆಟಿಕ್ಸ್ಗಳಿಗೆ(Athletics) ಲೈಟ್ ವ್ಯವಸ್ಥೆ ಇಲ್ದೇ ಕತ್ತ ಲೆಯಲ್ಲಿ ಮೊಬೈಲ್ ಟಾರ್ಚ್ ಹಿಡಿದುಕೊಂಡು ರನ್ನಿಂಗ್ ಪ್ರಾಕ್ಟಿಸ್(practice) ಮಾಡ್ತಿದ್ರು. ಈ ಬಗ್ಗೆ ಬಿಗ್3ಯಲ್ಲಿ ಗರಂ ಆಗಿ ವರದಿ ಪ್ರಸಾರ ಮಾಡಿದ್ವಿ. ಬಿಗ್3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಮಹಾ ನಗರ ಪಾಲಿಕೆ ಆಯುಕ್ತರ ಬದ್ರುದ್ದೀನ್ ಸೌದಾಗರ್ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ರು. ಭೇಟಿ ನೀಡಿ ಮಾಸ್ಕ್ ಲೈಟ್(Mask light) ಬಗ್ಗೆ ಪರಿಶೀಲನೆ ನಡೆಸಿದ್ರು. ಆದಷ್ಟು ಬೇಗ ಅಳವಡಿಸೋ ಭರವಸೆ ನೀಡಿದ್ರು.ಈ ಬಗ್ಗೆ ಬಿಗ್3 ಒಂದು ಕಣ್ಣಿಟ್ಟಿತ್ತು. ಕ್ರೀಡಾಂಗಣದ ಮಾಸ್ಕ್ ಲೈಟ್ ಸಮಸ್ಯೆ ಬಗ್ಗೆ ಬಿಗ್3ಯಲ್ಲಿ ವರದಿ ಪ್ರಸಾರದ ಮಾಹಿತಿ ಪಡೆದ ಕ್ರೀಡಾ ಸಚಿವ ನಾಗೇಂದ್ರ (Minister Nagendra)ಅಧಿಕಾರಿಗಳಿಗೆ ಸರಿ ಪಡಿಸುವಂತೆ ಸೂಚನೆ ನೀಡಿದ್ರು. ತಕ್ಷಣವೇ ಎಚ್ಚೆತ್ತ ಕ್ರೀಡಾಧಿಕಾರಿ ಜಿ ಎಸ್ ಲೋಣಿ ಹಾಗೂ ಪಾಲಿಕೆ ಕಮೀಷನರ್ ಬದ್ರುದ್ದೀನ್ ಸೌದಾಗರ್ ಸಿಬ್ಬಂದಿಗಳಿಗೆ ಕಳುಹಿಸಿ ಫಟಾಫಟ್ ಹೊಸ 8 ಎಲ್ಇಡಿ ಫೋಕಸ್ ಲೈಟ್ ಅಳವಡಿಕೆ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ತೂಕ ಇಳಿಸಿಕೊಂಡಿದ್ದೇ ವಿಜಯ್ ರಾಘವೇಂದ್ರ ಪತ್ನಿ ಸಾವಿಗೆ ಕಾರಣವಾಯ್ತಾ ?