Jan 24, 2023, 5:00 PM IST
ಒಂದು ಕಡೆ ಜಾನುವಾರುಗಳು, ಅಲ್ಲಿಯೇ ಪಾಠ ಕಲಿಯುತ್ತಿರೋ ಮುಗ್ದ ಮಕ್ಕಳು. ಇದು ದೋಣಿಗಾಲ್ ಗ್ರಾಮದ ಅಂಗನವಾಡಿ ಕೇಂದ್ರದ ಸ್ಥಿತಿ. ಬಡವರ ಮಕ್ಕಳು ಅನಿರ್ವಾರ್ಯವಾಗಿ ಈ ಅಂಗನವಾಡಿ ಕೇಂದ್ರಕ್ಕೆ ಬಂದು ಪಾಠ ಕಲಿಯುತ್ತಿದ್ದಾರೆ. ಈ ಕೇಂದ್ರದಲ್ಲಿ 13ಕ್ಕೂ ಅಧಿಕ ಮಕ್ಕಳು ದಾಖಲಾಗಿದ್ದಾರೆ. ದನಗಳ ಪಕ್ಕ ಪಾಠ ಕಲಿಸೋ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳಿಸಲು ಇನ್ನೂ ಕೆಲ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಗಮನಕ್ಕೆ ಹಾಗೂ ಬಿಇಒ ಗಮನಕ್ಕೂ ತರಲಾಗಿದೆ. ಆದ್ರೆ ದೋಣಿಗಾಲ್ ಗ್ರಾಮದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರ ಶಿಫ್ಟ್ ಮಾಡಿಕೊಳ್ಳಿ ಎಂದು ಸಿಡಿಪಿಒ ಸೂಚಿಸಿದ್ದರು. ಹೀಗಾಗಿ ಸದ್ಯಕ್ಕೆ ಕಾಲಿ ಇರೋ ಈ ಕೊಟ್ಟಿಗೆ ಮನೆಯನ್ನೇ ತಿಂಗಳಿಗೆ 500 ರೂಪಾಯಿ ಬಾಡಿಗೆ ನೀಡಿ ಅಂಗನವಾಡಿ ಕೇಂದ್ರವನ್ನಾಗಿ ನಡೆಸಲಾಗುತ್ತಿದೆ. ಆದಷ್ಟು ಬೇಗ ಈ ಮಕ್ಕಳಿಗೆ ಒಂದೊಳ್ಳೆ ವ್ಯವಸ್ಥೆ ಕಲ್ಪಿಸಿ ಕೊಡಿ ಅನ್ನೋದು ಬಿಗ್-3 ಆಗ್ರಹವಾಗಿದೆ.
ಗದಗ ಡಾರ್ಕ್ ಮಾರ್ಕೆಟ್‌ಗೆ ಕೊನೆಗೂ ಬಂತು ಬೆಳಕು: ಇದು ಬಿಗ್-3 ಫಲಶ್ರುತಿ