Sep 30, 2021, 2:01 PM IST
ಕಲಬುರಗಿ(ಸೆ.30): ಕಾಲರಾ ರೋಗದಿಂದ ಇಬ್ಬರು ಸಾವನ್ನಪ್ಪಿ, 60ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ದಸ್ತಾಪುರ ಗ್ರಾಮದಲ್ಲಿ ವಾಂತಿ, ಬೇಧಿ ಉಲ್ಬಣಗೊಂಡಿದೆ. ಕಮಲಾಬಾಯಿ(55), ದ್ರೌಪದಿ (60) ಎಂಬುವರು ಕಾಲರಾಕ್ಕೆ ಬಲಿಯಾಗಿದ್ದಾರೆ. ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಮಂದಿಗೆ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಹೀಗಾಗಿ ಗ್ರಾಮದ ಜನತೆ ಆತಂಕದಲ್ಲಿದ್ದಾರೆ.