Feb 14, 2020, 12:31 PM IST
ಬಾಗಲಕೋಟೆ(ಫೆ.14): ಬಾಗಲಕೋಟೆ ಜಿಲ್ಲೆಯಲ್ಲಿ 1 ಟ್ರ್ಯಾಕ್ಟರ್ ಇಂಜಿನ್, 16ಟ್ರ್ಯಾಕ್ಟರ್ ಟೇಲರ್ ಕಬ್ಬು ಸಾಗಾಣೆ ಮಾಡಿರುವ ಘಟನೆ ನಡೆದಿದೆ. ಒಂದೇ ಎಂಜಿನ್‌ನಲ್ಲಿ 16 ಲೋಡ್ ಕಬ್ಬನ್ನು ಸಾಗಿಸಲಾಗಿದೆ.
16ಜನ ಸೇರಿ ಎರಡು ದಿನದಲ್ಲಿ ಕಬ್ಬು ಕಟಾವು ಮಾಡಿ 16ಟೇಲರ್‌ಗೆ ಕಬ್ಬು ಲೋಡ್ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಉತ್ತೂರು ಗ್ರಾಮದಲ್ಲಿ ಕಬ್ಬು ಗ್ಯಾಂಗ್ ದಾಖಲೆ ಮಾಡಿದ್ದು, ಪರುಶುರಾಮ ಕಬಾಡದ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡಲಾಗಿದೆ.
ಅಕ್ರಮ ಸಂಬಂಧ: ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ..!
ಗ್ಯಾಂಗ್ ಮುಖ್ಯಸ್ಥ, ಟ್ರ್ಯಾಕ್ಟರ್ ಮಾಲೀಕ ಪುಂಡಲೀಕ ಕೊಳೂರು ಟ್ರ್ಯಾಕ್ಟರ್‌ನ 16ಟೇಲರ್ ಮೂಲಕ ಕಬ್ಬು ಸಾಗಾಣಿಕೆ ಮಾಡಲಾಗಿದೆ. ಚಾಲಕ ನಾಮದೇವ್ 16ಟೇಲರ್ ಕಬ್ಬು ತುಂಬಿದ ಟ್ರ್ಯಾಕ್ಟರ್ ಚಲಾಯಿಸಿ ಸಾಹಸ ಮೆರೆದಿದ್ದಾರೆ. ಉತ್ತೂರು ಗ್ರಾಮದ ಹೊರವಲಯದಲ್ಲಿರೋ ಐಸಿಪಿಎಲ್ ಸಕ್ಕರೆ ಕಾರ್ಖಾನೆಗೆ ನಿನ್ನೆ ಸಾಯಂಕಾಲ ಕಬ್ಬು ಸಾಗಿಸಲಾಗಿದೆ.
ಹಾಸ್ಯ ನಟನಿಗೆ ದುಬಾರಿ ಮದುವೆ ಗಿಫ್ಟ್; ಇದು ಧನುಶ್ ಸರಳತೆ!
ಕಬ್ಬು ಕಟಾವು, 16ಟೇಲರ್‌ಗೆ ಲೋಡ್ ಮಾಡಿದ 16 ಜನ್ರ ಕಬ್ಬು ಗ್ಯಾಂಗ್‌ಗೆ ಸನ್ಮಾನ ಮಾಡಲಾಗಿದ್ದು, ಕಬ್ಬು ಗ್ಯಾಂಗ್‌ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 165ಟನ್ ಕಬ್ಬು16ಟೇಲರ್‌ನಲ್ಲಿದ್ದ ಸಾಗಿಸಲಾಗಿದೆ.