IPL

IPL 2020: KXIP ಎದುರು ಆರೆಂಜ್ ಆರ್ಮಿಗೆ ಭರ್ಜರಿ ಜಯ

Oct 9, 2020, 2:19 PM IST

ಅಬುಧಾಬಿ(ಅ.09): ಗೆಲ್ಲಲೇಬೇಕಾಗಿದ್ದ  ಪಂದ್ಯದಲ್ಲಿ ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರು ಆಘಾತಕಾರಿ ಸೋಲು ಕಂಡಿದೆ. ಇದರೊಂದಿಂಗೆ ಪಂಜಾಬ್ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಹೌದು, ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್‌ಸ್ಟೋವ್ ಶತಕದ ಜತೆಯಾಟವಾಡುವ ಮೂಲಕ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಬೇರ್‌ಸ್ಟೋವ್ ಕೇವಲ 3 ರನ್ ಅಂತರದಲ್ಲಿ ಶತಕವಂಚಿತರಾದರು.

ಬಲಿಷ್ಠ ಡೆಲ್ಲಿಗಿಂದು ರಾಜಸ್ಥಾನ ಸವಾಲು; 4ನೇ ಸೋಲಿನ ಭೀತಿಯಲ್ಲಿ ಸ್ಮಿತ್ ಪಡೆ

ಇನ್ನು ಸವಾಲಿನ ಮೊತ್ತ ಬೆನ್ನಟ್ಟಿದ ಪಂಜಾಬ್ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.