IPL

IPL 2020: ಸೂಪರ್ ಶನಿವಾರದಲ್ಲಿ ಗೆಲ್ಲೋರು ಯಾರು?

Oct 17, 2020, 4:04 PM IST

ಬೆಂಗಳೂರು(ಅ.17): ಸೂಪರ್ ಶನಿವಾರದಲ್ಲಿಂದ ಎರಡು ಪಂದ್ಯಗಳು ನಡೆಯುತ್ತಿದ್ದು ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ.

ಇನ್ನೊಂದು ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಎದುರು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಾಡಲಿದ್ದು, ಪ್ಲೇ ಆಪ್ ಪ್ರವೇಶದ ದೃಷ್ಠಿಯಿಂದ ಸಿಎಸ್‌ಕೆ ತಂಡ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಡೆಲ್ಲಿ ಚಾಲೆಂಜ್‌ಗೆ ಸಿದ್ದವಾದ ಚೆನ್ನೈ ಸೂಪರ್ ಕಿಂಗ್ಸ್

ಎರಡು ಪಂದ್ಯಗಳು ಹೇಗಿರಲಿದೆ. 4 ತಂಡಗಳ ಬಲಾಬಲಗಳೇನು? ರಾಜಸ್ಥಾನ ಎದುರು ಆರ್‌ಸಿಬಿ ಮತ್ತೊಮ್ಮೆ ಜಯಭೇರಿ ಬಾರಿಸುತ್ತಾ? ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಿಎಸ್‌ಕೆ ತಿರುಗೇಟು ನೀಡುತ್ತಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.