IPL

ಐಪಿಎಲ್ 2020: ರಾಜಸ್ಥಾನ ಎದುರು ಸಿಎಸ್‌ಕೆ ಸೋತಿದ್ದೆಲ್ಲಿ..?

Oct 20, 2020, 1:13 PM IST

ಬೆಂಗಳೂರು(ಅ.20): ರಾಜಸ್ಥಾನ ರಾಯಲ್ಸ್ ಎದುರು ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಆಘಾತಕಾರಿ ಸೋಲು ಕಂಡಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಸ್ಟೀವ್ ಸ್ಮಿತ್ ಪಡೆ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಹೌದು, ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ರಾಜಸ್ಥಾನ ಬೌಲಿಂಗ್ ಎದುರು ಧೋನಿ ಪಡೆ ಚೆನ್ನೈ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದರು.

ಅಮಿತ್ ಮಿಶ್ರಾ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಕೂಡಿಕೊಂಡ ಕರ್ನಾಟಕದ ಆಟಗಾರ..!

ಇನ್ನು ಕೇವಲ 126 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ ಜೋಸ್ ಬಟ್ಲರ್ ಹಾಗೂ ಸ್ಟೀವ್ ಸ್ಮಿತ್ ಜೋಡಿ ಮುರಿಯದ 97 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿದರು. ರಾಜಸ್ಥಾನ-ಸಿಎಸ್‌ಕೆ ನಡುವಿನ ಪಂದ್ಯ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.