ಚಿರತೆ ಬಿಂದಾಸ್ ಓಡಾಟ, ಲಾರಿ ಚಾಲಕ ಜಸ್ಟ್ ಮಿಸ್; ಧಸ್ ಎನ್ನಿಸುವ ವಿಡಿಯೋ

May 19, 2020, 5:39 PM IST

ಹೈದರಾಬಾದ್ (ಮೇ 19)  ಕೊರೋನಾ ವೈರಸ್ ಕಾರಣಕ್ಕೆ ಪ್ರಾಣಿಗಳು ನಗರದಲ್ಲಿ ಸಂಚಾರ ಮಾಡುತ್ತಿರುವುದು ಹೊಸದೇನಲ್ಲ. ಈಗ ಹೈದರಾಬಾದ್ ನ ಕತೆ ಹೇಳಿತ್ತೇವೆ ಕೇಳಿ.  ಇದ್ದಕ್ಕಿದ್ದಂತೆ ಲಾರಿ ಚಾಲಕರ ಮೇಲೆ  ಚಿರತೆಯೊಂದು ದಾಳಿ ಮಾಡಿದೆ. 

ಚಿರತೆ ಮತ್ತು ಹಸು ಒಂದೇ ಕಡೆ, ಗುಜರಾತ್ ನಲ್ಲಿ ವಿಶೇಷ ದೃಶ್ಯ

ಹಾಗೋ ಹೀಗೋ ಲಾರಿ ಚಾಲಕರು ಹತ್ತಿರದಲ್ಲಿದ್ದ ಲಾರಿ ಹತ್ತಿ ಬಚಾವ್ ಆಗಿದ್ದಾರೆ.  ಚಿರತೆ ವಾಸನೆ ಹಿಡಿದ ನಾಯಿಗಳು ಹಿಂಡಾಗಿ ಆಗಮಿಸಿವೆ. ಈ ವೇಳೆ ಗಲಿಬಿಲಿಗೊಂಡ ಚಿರತೆ ಅಲ್ಲಿಂದ ಜಾಗ ಖಾಲಿ ಮಾಡಲು ಯತ್ನಿಸಿದೆ.  ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.