May 28, 2020, 10:50 AM IST
ಬೆಂಗಳೂರು (ಮೇ. 28): ಕೊರೋನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಮೇ 31 ರಂದು ಮುಕ್ತಾಯಗೊಳ್ಳಲಿದ್ದು ಮತ್ತೆ ವಿಸ್ತರಣೆಯಾಗುವುದೋ ಎಂಬ ಚರ್ಚೆ ಶುರುವಾಗಿದೆ. ದೇಶಾದ್ಯಂತ ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮತ್ತೆ 2 ವಾರಗಳ ಕಾಲ ಲಾಕ್‌ಡೌನ್ 5.0 ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಲಾಕ್‌ಡೌನ್ ಎಫೆಕ್ಟ್: ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ವಿತರಣೆ
ಧಾರ್ಮಿಕ ಸ್ಥಳಗಳಿಗೆ , ಜಿಮ್‌ಗಳಿಗೆ ಅವಕಾಶ ನೀಡುವ ಸಾಧ್ಯತೆ ಇದ್ದು, ಮಾಲ್, ಶಾಲೆ, ಸಿನಿಮಾ, ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಅಂತರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.