Jul 1, 2020, 4:12 PM IST
ಬೆಂಗಳೂರು(ಜು.01): ದೇಶ ಏಕಕಾಲದಲ್ಲಿ ಎರಡೆರಡು ಸಮಸ್ಯೆಗಳ ವಿರುದ್ಧ ಹೋರಾಡುತ್ತಿದೆ. ಒಂದು ಕಡೆ ಚೀನಾ ಗಡಿ ಗಲಾಟೆಯಾದರೆ ಮತ್ತೊಂದೆಡೆ ಕೊರೋನಾ ಕಾಟ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗರೀಬ್ ಕಲ್ಯಾಣ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸಿದ್ದಾರೆ.
ಸರಿಯಾದ ಸಮಯದಲ್ಲಿ ತೆಗೆದುಕೊಂಡ ಲಾಕ್‌ಡೌನ್ ನಿರ್ಧಾರ ಲಕ್ಷಾಂತರ ಜನರ ಪ್ರಾಣ ಉಳಿಸಿದೆ. ದೇಶ ಕೊರೋನಾ ವಿರುದ್ಧ ಹಗಲು-ರಾತ್ರಿ ಹೋರಾಡುತ್ತಿದೆ, ಹೀಗಿರುವಾಗಲೇ ಮೋದಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
'ಒಬ್ಬ ಕಳ್ಳ, ಇನ್ನೊಬ್ಬ ಸುಳ್ಳ' ಕುತಂತ್ರಿ ಪಾಕ್‌ಗಾಗಿ ಭದ್ರತಾ ಮಂಡಳಿಯಲ್ಲೂ ಚೀನಾ ಲಾಬಿ!
ಕೊರೋನಾ ಬಗ್ಗೆ ಅಸಡ್ಡೆ ತೋರುತ್ತಿರುವ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ಕೊರೋನಾ ನಿಯಮ ಪಾಲಿಸುವ ವಿಚಾರದಲ್ಲಿ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಪ್ರಧಾನ ಮಂತ್ರಿವರೆಗೂ ಕಾನೂನಿಗಿಂತ ದೊಡ್ಡವರಿಲ್ಲ ಎಂದು ಮೋದಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.