'ಮಾತೃಧರ್ಮ ಪಾಲಿಸಿದ್ದೇನೆ': ಸುವರ್ಣ ನ್ಯೂಸ್ ಜೊತೆ ನಿರ್ಭಯಾ ತಾಯಿ ಮಾತು

Mar 20, 2020, 5:52 PM IST

ನವದೆಹಲಿ (ಮಾ. 20): ಏಳು ವರ್ಷಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ‘ನಿರ್ಭಯಾ’ ಅತ್ಯಾಚಾರ ಹಾಗೂ ಅಮಾನುಷ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ನೇಣುಗಂಬಕ್ಕೆ ಏರಿಸಲು ಇದ್ದ ಎಲ್ಲ ಅಡೆ-ತಡೆಗಳು ಗುರುವಾರ ನಿವಾರಣೆಯಾಗಿವೆ. ಶುಕ್ರವಾರ ನಸುಕಿನ ಜಾವ 5.30ಕ್ಕೆ ಸರಿಯಾಗಿ ಅತ್ಯಾಚಾರಿಗಳಾದ ಮುಕೇಶ್‌ ಸಿಂಗ್‌ (32), ಪವನ್‌ ಗುಪ್ತಾ (25), ವಿನಯ್‌ ಶರ್ಮಾ (26) ಹಾಗೂ ಅಕ್ಷಯ್‌ ಠಾಕೂರ್‌ (31) ಗಲ್ಲುಗಂಬವನ್ನೇರಿದ್ದಾರೆ. 

ನಿರ್ಭಯಾ ತಾಯಿ ಬಗ್ಗೆ ಅಸಭ್ಯ ಹೇಳಿಕೆ ನೀಡಿದ ದೋಷಿ ವಕೀಲ ಆರ್.ಪಿ. ಸಿಂಗ್

ಅತ್ಯಂತ ಘೋರ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿ ‘ನಿರ್ಭಯಾ’ಳನ್ನು ಕೊಂದಿದ್ದ ಹಾಗೂ ಮರಣದಂಡನೆಯಿಂದ ಪಾರಾಗಲು ಕುಂಟುನೆಪಗಳನ್ನು ಹುಡುಕಿ ದೇಶದ ಕಾನೂನು ವ್ಯವಸ್ಥೆಯನ್ನೇ ಅಣಕ ಮಾಡಿದ್ದ ದುರುಳರಿಗೆ ಈ ಮೂಲಕ ತಕ್ಕ ಶಾಸ್ತಿಯಾಗಿದೆ. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಿರುವುದರ ಬಗ್ಗೆ ನಿರ್ಭಯಾ ತಾಯಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.