ನವದೆಹಲಿ (ಮಾ.20): ಇಡೀ ದೇಶವೇ ನ್ಯಾಯಕ್ಕಾಗಿ ಕಾದು ಕುಳಿತ ದಿನ ಅಂತೂ ಬಂದಿದೆ. ಅನ್ಯಾಯವಾಗಿ ಅತ್ಯಾಚಾರವೆಸಗಿದ್ದಲ್ಲದೇ, ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಟ ಪಾತಕಿಗಳು ನೇಣಿಗೇರಿದ್ದಾರೆ. ಭಾರತದ ಹೆಣ್ಣು ಸಂಕುಲವೇ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟ ದಿನವಿದು. ಇದೇ ಸಂದರ್ಭದಲ್ಲಿ ದೋಷಿಗಳ ಪರ ವಾದ ಮಾಡಿ, ಈ ದೋಷಿಗಳಿಗೆ ಇಷ್ಟು ವರ್ಷಗಳ ಕಾಲ ನೇಣಾಗದಂತೆ ವಾದಿಸಿದ ವಕೀಲ ಆರ್.‌ಪಿ.ಸಿಂಗ್ ಮತ್ತೆ ತಮ್ಮ ನಾಲಿಗೆ ಹರಿಯ ಬಿಟ್ಟಿದ್ದು, ಪ್ರಕರಣದಲ್ಲಿ ತಮಗಾದ ಸೋಲಿನ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. 

ಒಬ್ಬ ಮಗಳ ತಂದೆಯೂ ಆಗಿರುವ ಈ ಸಿಂಗ್ ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡಿದ್ದು ಇದೇ ಮೊದಲಲ್ಲ. ಇದೀಗ ನಾಲ್ವರಿಗೂ ಗಲ್ಲಾದ ಬೆನ್ನಲ್ಲೇ ಇಡೀ ದೇಶವೇ ಸಂಭ್ರಮದಲ್ಲಿರುವಾಗ ಮದುವೆಯಾಗದ ಹೆಣ್ಣೊಂದು, ಒಬ್ಬ ಹುಡುಗನೊಟ್ಟಿಗೆ ಹೊರ ಹೋಗುವುದು ತಪ್ಪು, ಅದನ್ನು ನಿರ್ಭಯಾ ಕುಟುಂಬ ಒಪ್ಪಿಕೊಳ್ಳುತ್ತಿತ್ತೋ ಏನೋ, ಆದರೆ ನನ್ನಂಥ ಸುಸಂಸ್ಕೃತ ಕುಟುಂಬ ಹೆಣ್ಣಿನ ಅಂಥ ನಡೆಯನ್ನು ಸ್ವೀಕರಿಸಲು ಸಿದ್ಧವಿಲ್ಲ. ,' ಎಂದಿದ್ದರು. ಇದೀಗ ದೋಷಿಗಳು ಸತ್ತ ಬಳಿಕವೂ ಅಂಥದ್ದೇ ಹೇಳಿಕೆಯನ್ನು ಪುನಾರವರ್ತಿಸಿದ್ದು, 'ನಾನೇ ನಿರ್ಭಯಾ ಅಮ್ಮ ಆಶಾ ಸ್ಥಾನದಲ್ಲಿದ್ದರೆ, ನನ್ನ ಮಗಳನ್ನು ನನ್ನು ಕುಟುಂಬದ ಎಲ್ಲರ ಎದುರಿಗೇ ಪೆಟ್ರೋಲ್ ಹಾಕಿ ಸುಟ್ಟಿರುತ್ತಿದ್ದೆ,' ಎನ್ನುವ ಮೂಲಕ ಮತ್ತೊಮ್ಮೆ ಹೆಣ್ಣು ಕುಲವನ್ನೇ ಅವಮಾನಿಸಿದ್ದಾರೆ. 

ನಿರ್ಭಯಾ ಗಲ್ಲು ಶಿಕ್ಷೆ ಪ್ರಕ್ರಿಯೆ ಹೀಗಿತ್ತು

ಕಡೇ ಕ್ಷಣದವರೆಗೂ ನಾಲ್ವರು ದೋಷಿಗಳನ್ನು ಗಲ್ಲು ಶಿಕ್ಷೆಯಿಂದ ತಪ್ಪಿಸಲು ಶತಾಯ ಗತಾಯ ಯತ್ನಿಸಿದ್ದ ಸಿಂಗ್‌ಗೆ ಕಡೆಗೂ ಸೋಲಾಗಿದ್ದು, ನ್ಯಾಯವೇ ಗೆದ್ದಿದೆ. ಇದನ್ನು ತಡೆಯಲಾಗದ ಸಿಂಗ್ ಇಂಥ ಹೇಳಿಕೆ ನೀಡಲು ಮುಂದಾಗಿದ್ದಾರೆಂದು ನ್ಯಾಯ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಿರುವ ಭಾರತೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲು ಅಡ್ಡಿ ಪಡಿಸಿದ್ದಲ್ಲದೇ, ಇದೀಗ ಹೆಣ್ಣನ್ನೆ ಅವಮಾನಿಸುವಂಥ ಹೇಳಿಕೆ ನೀಡುವ ಮೂಲಕ ನೊಂದ, ಅಮಾಯಕ ತಾಯಿಯನ್ನು ಹೀಯಾಳಿಸುತ್ತಿದ್ದಾರೆ. ಸಿಂಗ್ ಇಷ್ಟು ಕೀಳು ಮಟ್ಟದ ಹೇಳಿಕೆ ನೀಡಿಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. 

ಯಾರಿದು ಆರ್.ಪಿ.ಸಿಂಗ್?
ಕ್ರಿಮಿನಾಲಜಿಯಲ್ಲಿ ಪದವಿ ಪಡೆದಿರುವ ಸಿಂಗ್, ಆರಂಭದಿಂದಲೂ ನಿರ್ಭಯಾ ಹತ್ಯಾಚಾರಿ ದೋಷಿಗಳು ಗಲ್ಲಿಗೇರದಂತೆ ಒಂದಲ್ಲೊಂದು ನೆಪವೊಡ್ಡಿ ಕೋರ್ಟ್ ಮೆಟ್ಟಿಲು ಏರುತ್ತಿದ್ದರು. ಶಿಕ್ಷೆ ಜಾರಿಯಾಗದಂತೆ ನೋಡಿಕೊಂಡವರು. ಮಾರ್ಚ್ 19ರ ರಾತ್ರಿಯೂ ಹೈಡ್ರಾಮಾ ಮಾಡಿ, ಗಲ್ಲಾಗದಂತೆ ತಪ್ಪಿಸಲು ಯತ್ನಿಸಿದ್ದರು. ದಿಲ್ಲಿ ಹೈ ಕೋರ್ಟಿನಲ್ಲಿ ಇವರ ವರ್ತನೆ ವಿರುದ್ಧ ಬಾರ್ ಕೌನ್ಸಿಲ್ ನೋಟಿಸ್ ಸಹ ಜಾರಿ ಮಾಡಿತ್ತು. 

ಎಂಥದ್ದೇ ಪರಿಸ್ಥಿತಿ ಇದ್ದರೂ ಹತ್ಯಾಚಾರಿಗಳಿಗಾದ ಪವನ್ ಗುಪ್ತಾ, ಅಕ್ಷಯ್ ಕುಮಾರ್ ಸಿಂಗ್ ಹಾಗೂ ವಿನಯ್ ಶರ್ಮಾ ಪರ ಇವರು ವಾದಿಸಿದ್ದರು. ಇನ್ನೊಬ್ಬ ದೋಷಿ ಮುಕೇಶ್ ಕುಮಾರ್ ವಿರುದ್ಧ ವೃಂದಾ ಗ್ರೋವರ್ ನೇತೃತ್ವದ ಮತ್ತೊಂದು ಕಾನೂನು ತಂಡ ವಾದಿಸಿತ್ತು. 

ಶಿಕ್ಷೆಗೂ ಮುನ್ನ ನೇಣಿಗೇರಿಸದಂತೆ ಗೋಗೆರದ ನಿರ್ಭಯಾ ದೋಷಿಗಳು

46 ವರ್ಷದ ಅಜಯ್ ಪ್ರಕಾಶ್ ಸಿಂಗ್ ಲಖ್ನೋ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾರೆ. 1997ರಿಂದಲೂ ಸುಪ್ರೀಂ ಕೋರ್ಟಿನಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. 

ಎಪಿ ಸಿಂಗ್ ವರ್ತನೆಗೆ ಜನರೂ ಅದೆಷ್ಟು ಬೇಸತ್ತಿದ್ದರು ಎಂದರೆ, ಕಡೇ ಕ್ಷಣದಲ್ಲಿ ನಿರ್ಭಯಾ ದೋಷಿಗಳಿಗೆ ಗಲ್ಲು ಶಿಕ್ಷೆಯಾದಾಗ 'ಈ ವಕೀಲನಿಗೂ ಗಲ್ಲಾಗಬೇಕಿತ್ತು...' ಎಂದೇ ಗೊಣಗಿಕೊಂಡಿದ್ದರು.

"