Dec 22, 2020, 5:38 PM IST
ಬೆಂಗಳೂರು(ಡಿ.22): ಬ್ರಿಟನ್‌ನಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಭಾರತದ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ರಿಟನ್‌ನಿಂದ ಬಂದವರಿಗೆ ಟೆಸ್ಟ್ ಕಡ್ಡಾಯಗೊಳಿಸಿದೆ. ಅಲ್ಲದೇ ಈ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದವರಿಗೆ ಸರ್ಕಾರಿ ಕ್ವಾರಂಟೈನ್ ಕೂಡಾ ಕಡ್ಡಾಯಗೊಳಿಸಲಾಗಿದೆ.
ನನಗೆ ಆರೋಗ್ಯ ಸಮಸ್ಯೆ ಇಲ್ಲ; ಲಂಡನ್‌ನಿಂದ ಹಿಂದಿರುಗಿದ ಹರ್ಷಿಕಾ ಸ್ಪಷ್ಟನೆ!
ಇದೇ ವೇಳೆ ಪ್ರಯಾಣಿಕರ ಪಟ್ಟಿ ತಯಾರಿಸುವ ಹೊಣೆ ರಾಜ್ಯಗಳಿಗೆ ವಹಿಸಿದೆ. ಯಾರೇ ಆಗಲಿ ವಿದೇಶ ಅದರಲ್ಲೂ ವಿಶೇಷವಾಗಿ ಬ್ರಿಟನ್‌ನಿಂದ ಬಂದರೆ ಅವರ ಪಟ್ಟಿ ಮಾಡಲೇಬೇಕು. ಇಷ್ಟೇ ಅಲ್ಲದೇ ಕೇಂದ್ರ ನೀಡಿರುವ ಮಾರ್ಗಸೂಚಿಯಲ್ಲಿ ಬೇರೆ ಯಾವೆಲ್ಲಾ ನಿಯಮವಿದೆ? ಇಲ್ಲಿದೆ ವಿವರ