Maldives-India: ಮೋದಿ ವಿರುದ್ಧ ಮಾತಾಡಿದ್ದಕ್ಕೇ ಇಷ್ಟೆಲ್ಲಾ ಎಫೆಕ್ಟಾ..? ಮಾಲ್ಡೀವ್ಸ್‌ಗೆ ಭಾರತದ ಕೊಡುಗೆ ಏನೇನು ಗೊತ್ತಾ..?

Feb 1, 2024, 4:07 PM IST

ಮೊನ್ನೆ ಮೊನ್ನೆ ತಾನೇ ಮಾಲ್ಡೀವ್ಸ್(Maldives) ಸಂಸತ್‌ನಲ್ಲಿ ಮಾರಾಮಾರಿ ನಡೆದಿದೆ. ಆಡಳಿತ-ವಿರೋಧ ಪಕ್ಷಗಳ ಸಂಸದರು, ಒಬ್ಬರನ್ನೊಬ್ಬರು ಬದ್ಧಶತ್ರುಗಳ ಹಾಗೆ ಭಾವಿಸಿ, ಹೊಡೆದಾಟಕ್ಕೆ ಇಳಿದಿದ್ರು. ಕಲಾಪ ನಡೆಯುತ್ತಿದ್ದಾಗಲೇ ಕೈ ಕೈ ಮಿಲಾಯಿಸಿದ್ರು ಮಾಲ್ಡೀವ್ಸ್ ಸಂಸದರು. ಭಾರತ(India) ವಿರೋಧಿ ಮಾಲ್ಡೀವ್ಸ್ ಅಧ್ಯಕ್ಷನಿಗೆ ಈಗ ಪದಚ್ಯುತಿ ಭೀತಿ ಎದುರಾಗಿದೆ. ಮೊಹಮದ್ ಮುಯಿಝು(Mohamed Muizzu)  ಪದಚ್ಯುತಿಗೆ ವಿಪಕ್ಷಗಳು ಆಗ್ರಹ ಮಾಡ್ತಿದ್ದಾವೆ. ತನ್ನ ಅಧಿಕಾರ ಯಾವಾಗ ಜಾರಿ ಹೋಗುತ್ತೋ, ತನ್ನ ಗತಿ ಅದ್ಯಾವಾಗ ಏನಾಗುತ್ತೇ ಅನ್ನೋ ಆತಂಕದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ವದ್ದಾಡುವಂಥಾ ಸ್ಥಿತಿ ನಿರ್ಮಾಣವಾಗಿದೆ. ಮೊನ್ನೆ ತನಕ ಭಾರತದ ನೆರೆಹೊರೆ ರಾಷ್ಟ್ರಗಳ ಪೈಕಿ, ಫೇವರೆಟ್ ಕಂಟ್ರಿ ಅನ್ನಿಸಿಕೊಂಡಿದ್ದ ಮಾಲ್ಡೀವ್ಸ್, ಇದ್ದಕ್ಕಿದ್ದ ಹಾಗೆ, ಭಾರತವನ್ನೇ ವಿರೋಧಿಸೋಕೆ ಶುರು ಮಾಡ್ತು.. ಅದಕ್ಕೆ ಕಾರಣ ಏನು ಅನ್ನೋದನ್ನ ಹುಡುಕ ಹೊರಟಾಗ ಒಂದು ವಿಚಾರ ಸ್ಪಷ್ಟವಾಗಿತ್ತು.ಅದೇನು ಅಂದ್ರೆ, ಈ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಇದಾನಲ್ಲಾ, ಇವನು ಹೇಳಿ ಕೇಳಿ ಚೀನಾದ ದೋಸ್ತು.. ಅಲ್ಲೇ ಆಗಿದ್ದು ನೋಡಿ ದೊಡ್ಡ ಎಡವಟ್ಟು.

ಇದನ್ನೂ ವೀಕ್ಷಿಸಿ:  ಫಲಿಸಿತು ಹಿಂದೂಗಳ ಪ್ರಾರ್ಥನೆ, ಗ್ಯಾನವಾಪಿ ಮಸೀದಿ ಒಳಗಿನ ದೇವರ ಪೂಜೆಗೆ ಅವಕಾಶ!