Jul 25, 2024, 6:40 PM IST
ಬೆಂಗಳೂರು (ಜು.25): ಪ್ರತಿ ವರ್ಷದ ಜುಲೈ 26 ರಂದು ಭಾರತೀಯರಿಗೆ ಸಂಭ್ರಮ. ಯಾಕೆಂದರೆ, ಅದು ಕಾರ್ಗಿಲ್ ವಿಜಯ ದಿವಸ. ನುಸುಳುಕೋರ ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ತಮ್ಮ ಸೈನಿಕರು ಉತ್ತರ ಕೊಟ್ಟ ದಿನ.
ಕಾರ್ಗಿಲ್ ಯುದ್ಧಭೂಮಿಯಲ್ಲಿ ಪರಮ ವೀರಚಕ್ರ ಯೋಗೇಂದ್ರ ಕುಮಾರ್ ಯಾದವ್ ಆ ದಿನಗಳನ್ನು ನೆನಪು ಮಾಡಿಕೊಂಡು ಹೆಮ್ಮೆಯಿಂದ ಮಾತನಾಡಿದ್ದಾರೆ. ಅದರೊಂದಿಗೆ ಪಾಕ್ ನುಸುಳುಕೋರರನ್ನು ಮೊದಲು ಪತ್ತೆ ಮಾಡಿದ್ದ ತಾಶಿ ನಾಮ್‌ಗ್ಯಾಲ್ (Tashi Namgyal) ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಶಾಲಾ ದಿನದಲ್ಲೇ ಸೇನೆಗೆ ಸೇರಲು ಉತ್ಸುಕನಾಗಿದ್ದ; ಕಾರ್ಗಿಲ್ ಹುತಾತ್ಮ ಯೋಧನ ಕುರಿತು ತಂದೆಯ ಮಾತು!
ಬ್ರಿಗೇಡಿಯರ್ ಕುಶಾಲ್ ಠಾಕೂರ್ ಭಾರತ ಟೋಲೋಲಿಂಗ್ ಹಾಗೂ ಟೈಗರ್ ಹಿಲ್‌ಅನ್ನು ವಶಪಡಿಸಿಕೊಂಡಿದ್ದು ಹೇಗೆ ಅನ್ನೋದನ್ನು ವಿವರಿಸಿದ್ದಾರೆ. ಕಾರ್ಗಿಲ್ ಯುದ್ಧ ಕವರ್ ಮಾಡಿದ್ದ ಪತ್ರಕರ್ತ ಗುಲಾಮ್ ನಬಿ ಜಿಯಾ ಕೂಡ ಮಾತನಾಡಿದ್ದಾರೆ.