DK Shivakumar: ಅಮಾನತುಗೊಂಡ ಶಾಸಕರು ಈಗ ಎಲ್ಲಿದ್ದಾರೆ..? ಸಹೋದರ ಆಗ್ತಾರಾ..? ದಾಯಾದಿ ಆಗ್ತಾರಾ ವಿಕ್ರಮಾದಿತ್ಯ ಸಿಂಗ್..?

Mar 1, 2024, 5:31 PM IST


ರಾಜ್ಯಸಭಾ ಎಲೆಕ್ಷನ್ ನಂತರ ಹಿಮಾಚಲ ಪ್ರದೇಶ ರಾಜಕೀಯದಲ್ಲಿ ಕೋಲಾಹಲವೇ ಎದ್ದಿತ್ತು. ಅಧಿಕಾರದಲ್ಲಿದ್ದ ಕಾಂಗ್ರೆಸ್ (Congress) ಪಕ್ಷ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ಸರ್ಕಾರವನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೈಕಮಾಂಡ್ ಟ್ರಬಲ್ ಶೂಟರ್ ಡಿಕೆಶಿಗೆ ವಹಿಸಿತ್ತು. ಶಿಮ್ಲಾಗೆ(Shimla)ಡಿಕೆ ಎಂಟ್ರಿ ಕೊಟ್ಟ ನಂತರ ಅಲ್ಲಿನ ರಾಜಕೀಯ ಪರಿಸ್ಥಿತಿ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಾಜ್ಯಸಭಾ(Rajyasabha) ಎಲೆಕ್ಷನ್ ನಂತರ ಹಿಮಾಚಲ ಪ್ರದೇಶ ರಾಜಕೀಯದಲ್ಲಿ ಅನೇಕ ಬದಲಾವಣೆಗಳು ನಡೆದಿವೆ. ಗೆಲ್ಲಬೇಕಾದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗುತ್ತೆ. ಸೋಲಬೇಕಾದ ಬಿಜೆಪಿ ಅಭ್ಯರ್ಥಿಗೆ, ಕಾಂಗ್ರೆಸ್ ಶಾಸಕರುಗಳ ಅಡ್ಡ ಮತದಾನದಿಂದಾಗಿ ಗೆಲುವಾಗುತ್ತೆ. ಈ ಬಿಗ್ ಟ್ವಿಸ್ಟ್‌ನಿಂದ ಅಲ್ಲಿನ ರಾಜಕೀಯದಲ್ಲಿ ಅನೇಕ ಬದಲಾವಣೆಗಳು ಶುರುವಾಗುತ್ತವೆ. 40 ಸೀಟುಗಳ ಬಲ ಹೊಂದಿದ್ದ ಕಾಂಗ್ರೆಸ್ ಸರ್ಕಾರ ಅತಂತ್ರ ಸ್ಥಿತಿಗೆ ತಲುಪುತ್ತೆ. ಈ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯಲು ಮುಂದಾಗ ಬಿಜೆಪಿ(BJP), ಕಾಂಗ್ರೆಸ್ ಪಕ್ಷ ಬಹುಮತ ಸಾಬೀತು ಪಡಿಸಬೇಕೆಂದು ಕೇಳಿಕೊಳ್ಳುತ್ತೆ. ಹಾಗೆನೇ ಕಾಂಗ್ರೆಸ್ನ ಸಚಿವ ವಿಕ್ರಮಾದಿತ್ಯ ಸಿಂಗ್ ಜೊತೆಗೆ ಇನ್ನೊಂದಿಷ್ಟು ಕಾಂಗ್ರೆಸ್ ಶಾಸಕರುಗಳು ರಾಜೀನಾಮೆ ಕೊಡಬಹುದು ಎಂಬ ಸಂದರ್ಭವೂ ಅಲ್ಲಿ ನಿರ್ಮಾಣವಾಗುತ್ತೆ. ಈ ಎಲ್ಲ ಬೆಳವಣೆಗೆಗಳಿಂದ ಹಿಮಾಚಲ ಪ್ರದೇಶ(Himachala pradesh) ಸ್ಥಳೀಯ ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕುತ್ತೆ. ಸಂಕಷ್ಟದಲ್ಲಿ ಸಿಲುಕಿರುವ ಕಾಂಗ್ರೆಸ್ ಪಕ್ಷವನ್ನು ಕಾಪಾಡಲು, ಹೈಕಮಾಂಡ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್(DK Shivakumar) ಅವ್ರನ್ನು ಶಿಮ್ಲಾಗೆ ಕಳುಹಿಸುತ್ತೆ. ಸಂಕಷ್ಟದಲ್ಲಿದ್ದ ಪಕ್ಷ ಕಾಪಾಡಲು ಹೈ ಕಮಾಂಡ್ ಆದೇಶದಂತೆ ಡಿಕೆ ಶಿವಕುಮಾರ್ ಶಿಮ್ಲಾಗೆ ನಿನ್ನೆ ತೆರಳಿದ್ದರು. 

ಇದನ್ನೂ ವೀಕ್ಷಿಸಿ:  Bengaluru Murder: ಕೊಲ್ಲಲು ಬಂದವನೇ ಕೊಲೆಯಾಗಿ ಹೋದ..! ವಾರ್ನ್‌ ಮಾಡಲು ಹೋಗಿದ್ದೇ ತಪ್ಪಾಯ್ತಾ ?