May 13, 2020, 3:30 PM IST
ನವದೆಹಲಿ(ಮೇ.13): ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ರಣಕೇಕೆ ಭಾರತದಲ್ಲೂ ಮುಂದುವರೆದಿದ್ದು, ಕೋವಿಡ್ 19 ಸೋಂಕಿತರ ಸಂಖ್ಯೆ 75 ಸಾವಿರದ ಸಮೀಪ ತಲುಪಿದೆ. ಜನರಲ್ಲಿ ಕೊರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಲಾರಂಭಿಸಿದೆ.
ದೇಶದ ಐದು ರಾಜ್ಯಗಳು ಕೊರೋನಾ ಹಾಟ್‌ಸ್ಪಾಟ್ ಆಗಿ ಬದಲಾಗುತ್ತಿವೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ 24,427 ಕೇಸ್‌ಗಳು ದಾಖಲಾಗಿವೆ. ಇನ್ನು ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ನಲ್ಲಿ 8,904 ಕೊರೋನಾ ಪ್ರಕರಣಗಳು ದೃಢಪಟ್ಟಿವೆ.
ಕ್ವಾರೆಂಟೈನ್ ಸೀಲ್ ಇದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
ಇನ್ನುಳಿದಂತೆ ತಮಿಳುನಾಡು, ದೆಹಲಿಯಲ್ಲೂ ಕೋರೋನಾ ಅಟ್ಟಹಾಸ ಮುಂದುವರೆದಿದೆ. ಈವರೆಗೆ ದೇಶಾದ್ಯಂತ 17 ಲಕ್ಷ ಜನರು ಕೊರೋನಾ ಟೆಸ್ಟ್‌ಗೆ ಒಳಗಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.