News Hour: ದೇಶದ ಹಸಿವು ನೀಗಿಸಿದ್ದ ಹಸಿರುಕ್ರಾಂತಿ ಹರಿಕಾರನಿಗೆ ಭಾರತ ರತ್ನ ಗೌರವ!

Feb 9, 2024, 10:56 PM IST

ಬೆಂಗಳೂರು (ಫೆ.9): ಹಸಿರುಕ್ರಾಂತಿಯ ಹರಿಕಾರ ತಮಿಳುನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿ ಎಂಎಸ್‌ ಸ್ವಾಮಿನಾಥನ್‌ಗೆ ಶುಕ್ರವಾರ ಕೇಂದ್ರ ಸರ್ಕಾರ ಅತ್ಯುನ್ನತ ನಾಗರೀಕ ಪುರಸ್ಕಾರ ಭಾರತ ರತ್ನ ಘೋಷಣೆ ಮಾಡಿದೆ.

ದೇಶದ ಜನರನ್ನ ಹಸಿವು ನೀಗಿಸಿದ್ದ ಎಂ.ಎಸ್ ಸ್ವಾಮಿನಾಥನ್, ಭಾರತ ಕೃಷಿ ಸ್ವಾವಲಂಬಿ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಲವು ಅಕ್ಕಿ, ಗೋಧಿ ತಳಿಯನ್ನು ಅಭಿವೃದ್ಧಿ ಇವರು ಅಭಿವೃದ್ಧಿಪಡಿಸಸಿದ್ದರು. ಅತಿವೇಗವಾಗಿ ದ್ವಿದಳ ಧಾನ್ಯ ಬೆಳೆಯುವ ತಳಿಯನ್ನು ಇವರು ಅಭಿವೃದ್ಧಿ ಮಾಡಿದ್ದರು. ಆಹಾರ ಕೊರತೆಯ ದೇಶವನ್ನ ಆಹಾರ ಸಮೃದ್ಧ ದೇಶವನ್ನಾಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.

ಪಿವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್,ಎಂಎಸ್ ಸ್ವಾಮಿನಾಥನ್‌ಗೆ ಭಾರತ ರತ್ನ ಘೋಷಣೆ

ಹೆಚ್ಚು ಇಳುವರಿ ಕೊಡುವ ಗೋಧಿ ಮತ್ತು ಅಕ್ಕಿ ತಳಿಗಳನ್ನು ಇವರು ಅಭಿವೃದ್ಧಿಪಡಿಸಿದ್ದರು. ಕೋಟ್ಯಂತರ ಜನರ ಹಸಿವು ನೀಗಿಸಿದ ಖ್ಯಾತಿ ಎಂ.ಎಸ್ ಸ್ವಾಮಿನಾಥ್‌ ಅವರದ್ದಾಗಿತ್ತು. ಭಾರತದಲ್ಲಿನ ಬರ ಪರಿಸ್ಥಿತಿಗಳ ನಿವಾರಣೆಗೆ ಇವರು ಕಾರಣರಾಗಿದ್ದರು.