ಕೇಜ್ರಿವಾಲ್ ಸರ್ಕಾರದ ಅಬಕಾರಿ ನೀತಿಯಿಂದ ಆಗಿದ್ದೇನು..? ಮದ್ಯ ನೀತಿ ಹಗರಣ..! ನೂರೆಂಟು ನಿಗೂಢ ರಹಸ್ಯಗಳು!

Mar 23, 2024, 5:27 PM IST

21 ಮಾರ್ಚ್ 2024.. ಗುರುವಾರ ರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸಂಚಲನವೇ ಸೃಷ್ಟಿಯಾಯ್ತು. ಇಡೀ ದೇಶ ಹಿಂದೆಂದೂ ನೋಡದ ಘಟನೆಯೊಂದು ನಡೆದಿತ್ತು. ಒಬ್ಬ ಹಾಲಿ ಮುಖ್ಯಮಂತ್ರಿ. ಜೈಲುಕಂಬಿಯ ಹಿಂದೆ ನಿಲ್ಲುವಂತಾಯ್ತು. ಅಂಥದ್ದೊಂದು ಅತಿ ವಿಚಿತ್ರ ದಾಖಲೆ ಬರೆದಿದ್ದು. ಅರವಿಂದ್ ಕೇಜ್ರಿವಾಲ್(Arvind Kejriwal). ಕಳೆದ ಹಲವಾರು ದಿನಗಳಿಂದ ಇಡಿ ಇಲಾಖೆ(ED), ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಮೇಲೆ ಸಮನ್ಸ್ ಕೊಟ್ಟ ಸುದ್ದಿನಾ ನೀವ್ ಕೇಳೇ ಇರ್ತಾರೆ. ಆದ್ರೆ ಅದ್ಯಾವುದಕ್ಕೂ ಕೇಜ್ರಿವಾಲ್ ಸರಿಯಾಗಿ ಪರತಿಕ್ರಿಯಿಸಿರಲಿಲ್ಲ. ಅದನ್ನ ನೋಡುವಾಗ್ಲೇ, ಕೇಜ್ರಿವಾಲ್ ಯಾವ್ದೋ ಅನಾಹುತವೊಂದಕ್ಕೆ ಆಹ್ವಾನ ನೀಡ್ತಾ ಇದಾರೆ ಅನ್ನೋ ಮಾತು ಕೇಳಿಬಂದಿತ್ತು. ಅದೇ ಈಗ ನಿಜವಾಗಿದೆ.. ಅರವಿಂದ್ ಕೇಜ್ರಿವಾಲ್ ಅರೆಸ್ಟ್ ಆಗಿದಾರೆ. ಕೇಜ್ರಿವಾಕ್ ಅರೆಸ್ಟ್(Arrest) ಆಗೋಕೆ ಕಾರಣವಾಗಿದ್ದು ದೆಹಲಿ ಅಬಕಾರಿ ನೀತಿ ಅಕ್ರಮ(Delhi Excise Policy Scam ). ಅದಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 9 ಬಾರಿ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿತ್ತು. ಆದ್ರೆ ಆ ಎಲ್ಲಾ ಸಮನ್ಸ್‌ಗೂ ಒಂದರ್ಥದಲ್ಲಿ ಗೆ ಸೆಡ್ಡು ಹೊಡೆದು ನಿಂತಿದ್ರು ಕೇಜ್ರಿವಾಲ್‌. ಅಷ್ಟೇ ಅಲ್ಲ, ತಮಗ ಈ ಬಂಧನದಿಂದ ರಕ್ಷಣೆ ಕೊಡಿ ಅಂತ ಕೋರ್ಟ್ ಮೆಟ್ಟಿಲೇರಿದ್ರು. ಆದ್ರೆ, ಗುರುವಾರ ಕೇಜ್ರಿವಾಲ್ ಅವರ ಅರ್ಜಿನಾ ಕೋರ್ಟ್‌ ನಿರಾಕರಿಸಿತ್ತು. ಯಾವಾಗ ಕೋರ್ಟ್ ರಿಜೆಕ್ಟ್ ಮಾಡ್ತೋ, ಆ ಕ್ಷಣವೇ  ಇ.ಡಿ. ಅಧಿಕಾರಿಗಳು ತಮ್ಮ ಕೆಲಸ ಚಾಲೂ ಮಾಡಿದ್ರು.. ಕೈಯಲ್ಲಿ ಸರ್ಚ್ ವಾರೆಂಟ್‌ ಹಿಡಕೊಂಡು ಕೇಜ್ರಿವಾಲ್‌ ಮನೆಗೆ ಧಾವಿಸಿದರು.

ಇದನ್ನೂ ವೀಕ್ಷಿಸಿ:  ಕರಿಮಣಿ ಮಾಲೀಕನಾಗಬೇಕಿದ್ದವನೇ ಕೊಂದುಬಿಟ್ಟನಾ..? ತಾಳಿ ಕಟ್ಟಬೇಕಿದ್ದವನು ನೇಣುಬಿಗಿದಿದ್ದು ಯಾಕೆ ?