Dec 28, 2024, 9:03 AM IST
ಬೆಂಗಳೂರು(ಡಿ.28): ಬಿಜೆಪಿಯು 2023-24ರಲ್ಲಿ 2,244 ಕೋಟಿ ರೂಪಾಯಿಗಳ ದೇಣಿಗೆಗಳನ್ನು ಸ್ವೀಕರಿಸಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಇದರಲ್ಲಿ 700 ಕೋಟಿ ರೂಪಾಯಿಗಳ ಹೆಚ್ಚಳವಾಗಿದೆ. ಈ ನಡುವೆ ಕಾಂಗ್ರೆಸ್ ಇದೇ ಅವಧಿಯಲ್ಲಿ 288.9 ಕೋಟಿ ರೂಪಾಯಿ ಹಣವನ್ನು ದೆಣಿಗೆ ರೂಪದಲ್ಲಿ ಪಡೆದಿದ್ದು, 2022-23ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, 79.9 ಕೋಟಿ ರೂಪಾಯಿ ಏರಿಕೆಯಾಗಿದೆ. ಈ ಅಂಕಿ ಅಂಶಗಳು ಈಗ ಸಾರ್ವಜನಿಕವಾಗಿ ಲಭ್ಯವಿರುವ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೇಣಿಗೆ ವರದಿಗಳನ್ನು ಆಧರಿಸಿವೆ.
ಪಾಕ್ ಬತ್ತಳಿಕೆಗೆ ಬಂದಿವೆ ಚೀನಾ ಅಸ್ತ್ರಗಳು! ಅಗ್ನಿಪಂಜರದಲ್ಲಿ ಸಿಲುಕಿದೆಯಾ ಭಾರತ?
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಕೊಡುಗೆಗಳ ಗಮನಾರ್ಹ ಭಾಗವು ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಮೂಲಕ ಬಂದಿದೆ. ಈ ಟ್ರಸ್ಟ್‌ನಿಂದ ಬಿಜೆಪಿ 723.6 ಕೋಟಿ ರೂಪಾಯಿಗಳನ್ನು ಪಡೆದಿದೆ, ಅದು ಕಾಂಗ್ರೆಸ್‌ಗೆ 156.4 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ.