ಇಂಥಾ ಫುಡ್ ತಿನ್ನೋದ್ರಿಂದ್ಲೇ ಮಕ್ಕಳ ಹಲ್ಲು ಹುಳುಕು ಬರೋದು!

Feb 9, 2024, 4:13 PM IST

ಮಕ್ಕಳ ಆರೋಗ್ಯ ಯಾವಾಗಲೂ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಯಾವಾಗಲೂ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಆದರೆ ಮಕ್ಕಳಿಗೆ ಜ್ವರ, ಹೊಟ್ಟೆನೋವು ಬಂದಾಗ ತಲೆಕೆಡಿಸಿಕೊಳ್ಳೋ ಪೋಷಕರು ಮಕ್ಕಳ ಹಲ್ಲಿನ ಆರೋಗ್ಯದ ಬಗ್ಗೆ ಮರೆತುಬಿಡುತ್ತಾರೆ. ಮಕ್ಕಳ ಹಲ್ಲುಗಳಿಗೆ ಕುಳಿಗಳು, ಪ್ಲೇಕ್, ಹಲ್ಲಿನ ಹುಳುಕು ಸೇರಿದಂತೆ ಅನೇಕ ಸಮಸ್ಯೆಗಳು ಬರುತ್ತವೆ. ಅವುಗಳನ್ನು ಸಮಯಕ್ಕೆ ಸರಿಯಾಗಿ ಬಗೆಹರಿಸದಿದ್ದರೆ ಹೆಚ್ಚು ತೊಂದರೆ ಕಾರಣವಾಗಬಹುದು. ಹೀಗಾಗಿ ಹಲ್ಲಿನ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳುವುದು ಮುಖ್ಯ. ಇದಕ್ಕೆ ಮೊದಲು ಮಕ್ಕಳು ಹಲ್ಲುಗಳಿಗೆ ಎಂಥಾ ಆಹಾರಗಳು ಹಾನಿಕಾರಕ ಎಂಬುದನ್ನು ತಿಳಿದುಕೊಳ್ಳಬೇಕು. ಆ ಬಗ್ಗೆ ಮಕ್ಕಳ ದಂತ ವೈದ್ಯ ಡಾ. ಪ್ರವೀಣ್‌ ಮಾಹಿತಿ ನೀಡಿದ್ದಾರೆ.

ಮಕ್ಕಳು ಹಲ್ಲು ಕಡಿಯೋದ್ರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ?