Feb 14, 2022, 7:15 PM IST
ಜಗತ್ತಿನಲ್ಲೇ ಮೊದಲ ಬಾರಿಗೆ ಬೆನ್ನು ಹುರಿ ಮುರಿದವರು ಎದ್ದು ನಡೆವಂಥ ಆಪರೇಶನ್ ಸಕ್ಸಸ್ ಆಗಿದೆ. ಐದು ವರ್ಷದ ಹಿಂದೆ ಸ್ಟ್ರೋಕ್ ಹೊಡೆದು ಸ್ವಾಧೀನ ಕಳೆದುಕೊಂಡಿದ್ದ ವ್ಯಕ್ತಿಗೆ ಜಪಾನ್‌ನ ವಿಜ್ಞಾನಿಗಳು ಸ್ಪೈನಲ್ ಕಾರ್ಡ್ ಇಂಪ್ಲ್ಯಾಂಟ್ ಮಾಡಿ ಯಶಸ್ವಿಯಾಗಿದ್ದಾರೆ. ಈ ಕ್ರಾಂತಿಕಾರಿ ಸಂಶೋಧನೆಯಿಂದ ಲಕ್ಷಾಂತರ ಜನರಲ್ಲಿ ಆಶಾಕಿರಣ ಮೂಡಿದೆ.
Horror Restaurant: ಇಲ್ಲಿ ದೆವ್ವಗಳೇ ಊಟ ಬಡಿಸುತ್ತವೆ, ಬೆಚ್ಚಿ ಬೀಳಿಸುತ್ತವೆ..
ಪ್ಯಾರಾಲಿಸಿಸ್ ಆದವರು ಸಂಪೂರ್ಣ ಸ್ವಾಧೀನ ಕಳೆದುಕೊಳ್ಳುತ್ತಾರೆ. ಹೆಚ್ಚಿನವರು ಕೈ ಕಾಲುಗಳ ಸ್ವಾಧೀನ ಕಳೆದುಕೊಳ್ಳುತ್ತಾರೆ. ಇದನ್ನು ಸರಿ ಪಡಿಸಲು ಅಂಥಾ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇರಲಿಲ್ಲ. ಈಗ ಆ ಸ್ಪೈನಲ್ ಕಾರ್ಡ್ ಇದ್ದಲ್ಲಿ ಎಲೆಕ್ಟ್ರಾನಿಕ್ ಇಂಪ್ಲ್ಯಾಂಟ್ ಮಾಡುವುದರಿಂದ ಮೇಲೆ ಕೆಳಗಿನ ನರಗಳನ್ನು ಸೇರಿಸಿ ಅವುಗಳ ನಡುವೆ ಸಿಗ್ನಲ್ ಹೋಗುವಂತೆ ಮಾಡುತ್ತಾರೆ. ಇದರಿಂದ ಕೈ ಕಾಲುಗಳಿಗೆ ಮತ್ತೆ ಸ್ವಾಧೀನ ಬರುತ್ತದೆ. ಇದು ಮೊದಲೇ ಇದ್ದ ತಂತ್ರಜ್ಞಾನವೇ. ಆದರೆ, ಈ ಬಾರಿ ವಿಜ್ಞಾನಿಗಳು, ಇನ್ನೂ ಹೆಚ್ಚಿನ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಿದೆ.