ಜಗತ್ತಿನ ಅತಿ ಹಿರಿಯ ಸ್ವಾಮಿ ಸಿವಾನಂದರ ಆರೋಗ್ಯದ ಗುಟ್ಟೇನು? ಅವರ ಮಾತಲ್ಲೇ ಕೇಳಿ

Mar 23, 2022, 5:44 PM IST

126 ವರ್ಷದ ಯೋಗ ಗುರು, ಪದ್ಮಶ್ರೀ ಸ್ವಾಮಿ ಸಿವಾನಂದ(swami Sivananda) ಅವರು ಹಣ್ಣು ಮುಟ್ಟಲ್ಲ, ಹಾಲು ಕುಡಿಯಲ್ಲ, ದುಡ್ಡು ಮುಟ್ಟಲ್ಲ, ದಾನ ಪಡೆಯಲ್ಲ. ಶತಾಯುಷಯದ ಮೇಲೆ ಮತ್ತೊಂದು ಯೌವನ ಕಳೆವ ವಯಸ್ಸು ಬಂದಿದ್ದರೂ ಇವರು ಬರಿಗಣ್ಣಿನಲ್ಲೇ ನೋಡಬಲ್ಲರು, ಓದಬಲ್ಲರು ಬರೆಯಬಲ್ಲರು. ಕಾಲು ಮಡಚಿ ನಮಸ್ಕರಿಸಬಲ್ಲರು, ಕಾಲು ಬೀಸಿ ವೇಗವಾಗಿ ನಡೆಯಬಲ್ಲರು. ಬೆಳಗ್ಗೆ ಜಪತಪ ಮುಗಿಸಿ ಸಾಕೋಸಾಕಾಗುವಷ್ಟು ಯೋಗ, ಪ್ರಾಣಾಯಾಮ ಮಾಡಬಲ್ಲರು. ಇಂಗ್ಲಿಷ್, ಹಿಂದಿ, ಬೆಂಗಾಳಿಯಲ್ಲಿ ಪಟಪಟನೆ ಮಾತಾಡಬಲ್ಲರು. ಜಗತ್ತಿನಲ್ಲಿ ಜೀವಿತವಾಗಿರುವ ಅತಿ ಹಿರಿಯ ವ್ಯಕ್ತಿಯಾಗಿರೋ ಇವರ ಆರೋಗ್ಯದ ಗುಟ್ಟೇನು ಎಂಬುದು ಬಹಳ ಆಸಕ್ತಿಕರವಾಗಿದೆ. 

ಹಗಲು ನಿದ್ದೆ ಮಾಡುವ ಅಭ್ಯಾಸದಿಂದ ಆಲ್ಝೈಮರ್‌ ಅಪಾಯ ಹೆಚ್ಚು..!

6ನೇ ವಯಸ್ಸಿಗೇ ತಂದೆತಾಯಿಯನ್ನು ಕಳೆದುಕೊಂಡ ಸಿವಾನಂದರಿಗೆ ದೇವರ ಹಾಗೆ ಆಧ್ಯಾತ್ಮ ಗುರುಗಳೊಬ್ಬರು ಸಿಗುತ್ತಾರೆ. ಅವರ ಗರಡಿಯಲ್ಲಿ ಬೆಳೆದ ಸಿವಾನಂದರು ಆಧ್ಯಾತ್ಮ, ಯೋಗ, ಭಗವದ್ಗೀತೆಯನ್ನು ಸಂಪೂರ್ಣ ಮೈಗೂಡಿಸಿಕೊಂಡಿದ್ದಾರೆ. ಇವರ ಆಹಾರವೇನು, ಎಲ್ಲಿರುತ್ತಾರೆ, ಜೀವನಶೈಲಿಯೇನು, ಧೀರ್ಘಾಯಸ್ಸಿನ ಗುಟ್ಟೇನು- ಅವರ ಬಾಯಲ್ಲೇ ಕೇಳಿ ನೋಡಿ.