ಆಟೋ ಚಾಲಕನ ಪುಂಡಾಟ; ಅಡ್ಡ ಬಂದ ವಿದ್ಯಾರ್ಥಿಗೆ ಕುತ್ತಿಗೆಗೆ ಲಾಂಗ್ ಇಟ್ಟ!

Nov 7, 2019, 6:22 PM IST

ಹಾವೇರಿ (ನ.07): ಬೆಳ್ಳಂಬೆಳಗ್ಗೆ ಜೊಮ್ಯಾಟೋ ಡಿಲಿವರಿ ಬಾಯ್ಸ್‌ನ ಪುಂಡಾಟ ನೋಡಿದ್ವಿ. ಈಗ ಆಟೋ ಚಾಲಕನೊಬ್ಬನ ದುಂಡಾವರ್ತನೆಗೆ ಜನ ಬೆಚ್ಚಿಬಿದ್ದಿದ್ದಾರೆ. 

ಆಟೋಗೆ ಅಡ್ಡ ಬಂದ ಎಂಬ ಕಾರಣಕ್ಕೆ ಆಟೋ ಚಾಲಕನೊಬ್ಬ ವಿದ್ಯಾರ್ಥಿ ಕುತ್ತಿಗೆಗೆ ಲಾಂಗ್ ಇಟ್ಟ ಘಟನೆ ಹಾವೇರಿಯಲ್ಲಿ ನಡೆದಿದೆ. ತಾನೇನು ತಪ್ಪು ಮಾಡಿಲ್ಲ ಎಂದು ವಿದ್ಯಾರ್ಥಿ ಗೊಗೆರೆದರೂ, ಆ ಆಟೋ ಚಾಲಕ ಬಿಡಲಿಲ್ಲ. ಕೊನೆಗೆ ಸಾರ್ವಜನಿಕರು ಬಂದು ವಿದ್ಯಾರ್ಥಿಯನ್ನು ಕಾಪಾಡಿದರು.