ದೇವಸ್ಥಾನದ ಪ್ರಸಾದ ಆರೋಗ್ಯಕ್ಕೆ ಒಳ್ಳೇದು ಅನ್ನೋದ್ಯಾಕೆ?

Jul 19, 2023, 3:22 PM IST

ದೇವಸ್ಥಾನ, ಮಠಗಳಿಗೆ ಪ್ರತಿನಿತ್ಯ ಬರುವ ಸಾವಿರಾರು, ಲಕ್ಷಾಂತರಿಗೆ ಊಟ ಹಾಕುವ ವ್ಯವಸ್ಥೆಯಿರುತ್ತದೆ. ಇಲ್ಲಿ ಸಿಗೋ ಊಟ ಆರೋಗ್ಯಕ್ಕೆ ಒಳ್ಳೆಯದು ಎಂದು ಹಿರಿಯರು ಹೇಳ್ತಾರೆ. ದೇವಸ್ಥಾನದ ಊಟ ಆರೋಗ್ಯಕ್ಕೆ ಯಾವ ರೀತಿಯ ಉತ್ತಮ ಎಂಬುದನ್ನು ಆಹಾರ ತಜ್ಞೆ ಡಾ.ಪ್ರೇಮಾ ಎಚ್‌.ಎಸ್ ವಿವರಿಸಿದ್ದಾರೆ. ದೇವಸ್ಥಾನದಲ್ಲಿ ಸಿಗೋ ಪ್ರಸಾದವನ್ನು ನೀವು ಗಮನಿಸಿದ್ದೀರಾ? ಇದು ಎಷ್ಟು ದಿನವಾದರೂ ಕೆಟ್ಟು ಹೋಗುವುದಿಲ್ಲ. ಯಾಕೆಂದರೆ ಇದಕ್ಕೆ ಯಾವ ರೀತಿಯ ಕೃತಕ ಪ್ರಿಸರ್ವೇಟಿವ್‌ ಬಳಸಿರುವುದಿಲ್ಲ. ಸಹಜವಾದ ಪ್ರಿಸರ್ವೇಟಿವ್ ಬಳಸಿ ಇದನ್ನು ತಯಾರಿಸಲಾಗುತ್ತದೆ.  ಹಾಗಾಗಿ ಇದನ್ನು ಇಷ್ಟು ಕಾಲ ಡಬ್ಬದಲ್ಲಿ ಸಂಗ್ರಹಿಸಿಟ್ಟರೂ ಹಾಳಾಗುವುದಿಲ್ಲ' ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಇಂಥಾ ಪ್ರಸಾದ ಆಂಟಿ ಫಂಗಲ್‌, ಆಂಟಿ ಬ್ಯಾಕ್ಟಿರೀಯವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎಚ್ಚರ..ಬೇಯಿಸಿದ ಮತ್ತು ಬೇಯಿಸದ ಆಹಾರ ಮಿಕ್ಸ್ ಮಾಡಿ ತಿನ್ಲೇಬೇಡಿ