Mar 8, 2021, 2:59 PM IST
ಮಾರ್ಕಂಡೇಯ ಮುನಿ ತಪಸ್ಸು ತಪೋಭಂಗ ಮಾಡಲು ಇಂದ್ರ ತಂತ್ರ ಹೂಡುತ್ತಾನೆ. ರಂಭೆ, ಊರ್ವಶಿಯವರನ್ನು ಕಳುಹಿಸುತ್ತಾನೆ. ಮನ್ಮಥನನ್ನು ಕಳುಹಿಸುತ್ತಾನೆ. ಆದರೆ ಮಾರ್ಕಂಡೇಯರ ಮನಸ್ಸು ವಿಚಲಿತನಾಗುವುದಿಲ್ಲ. ಮಾರ್ಕಂಡೇಯರ ತೇಜಸ್ಸು, ಮನ್ಮಥನ ಪರಾಭವದಿಂದ ಇಂದ್ರ ಆಶ್ಚರ್ಯಚಕಿತನಾಗುತ್ತಾನೆ.
ಹರಿ ಧ್ಯಾನದಲ್ಲಿ ಮುಳುಗಿದ್ದ ಮಾರ್ಕಂಡೇಯರ ತಪೋಭಂಗ ಮಾಡಲು ಇಂದ್ರ ಮಾಡಿದ ತಂತ್ರವಿದು!
ಆಗ ಶ್ರೀಹರಿ ನಾರಾಯಣನ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. 'ನಿನ್ನ ಬ್ರಹ್ಮಚರ್ಯ ನಿಷ್ಠೆಗೆ ಮೆಚ್ಚಿದ್ದೇನೆ. ಬೇಕಾದ ವರ ಕೇಳು' ಎನ್ನುತ್ತಾನೆ. ಆಗ ಮಾರ್ಕಂಡೇಯರು ಸ್ವಾಮಿ ನಿಮ್ಮ ಮಾಯೆಯನ್ನು ನೋಡುವ ಮನಸ್ಸುಂಟಾಗಿದೆ ಎನ್ನುತ್ತಾರೆ. ಆಗ ಶ್ರೀಹರಿ ತನ್ನ ಮಾಯೆಯನ್ನು ತೋರಿಸುವುದ್ಹೀಗೆ..