Mar 28, 2021, 12:30 PM IST
ಸುದ್ಯುಮ್ನ ಎಂಬ ರಾಜಕುಮಾರ ಒಮ್ಮೆ ತನ್ನ ಸ್ನೇಹಿತರ ಜೊತೆ ಬೇಟೆಗೆ ಹೋಗುತ್ತಾನೆ. ದಟ್ಟವಾದ ಅರಣ್ಯವನ್ನು ಪ್ರವೇಶಿಸುತ್ತಾರೆ. ತಕ್ಷಣ ಅವರ ಶರೀರದಲ್ಲಿ ಬದಲಾವಣೆ ಆಗುತ್ತೆ. ಎಲ್ಲರೂ ಹೆಣ್ಣಾಗಿ ಬದಲಾಗಿರುತ್ತಾರೆ. ಕೆಲವು ದಿನ ಅಲ್ಲಿಯೇ ಕಾಲ ಕಳೆಯುತ್ತಾರೆ.
ಶಮಂತಕ ಮಣಿ ಕದ್ದ ಅಪನಿಂದನೆಯಿಂದ ಕೃಷ್ಣನನ್ನು ಪಾರು ಮಾಡಿದ್ದು ದೇವಿ ಭಾಗವತ!
ಸುದ್ಯುಮ್ನ ಚೆಲುವೆಯಾಗಿ ಓಡಾಡುತ್ತಿರುತ್ತಾನೆ. ಆ ಚೆಲುವೆ ಒಮ್ಮೆ ಬುಧನ ಕಣ್ಣಿಗೆ ಬಿದ್ದು, ಮೋಹಿಸುತ್ತಾನೆ. ಗಾಂಧರ್ವ ವಿವಾಹ ಕೂಡಾ ಆಗುತ್ತದೆ. ಈ ವಿಚಾರ ವಸಿಷ್ಠರಿಗೆ ಗೊತ್ತಾಗುತ್ತದೆ. ಶಿವನನ್ನು ಪ್ರಾರ್ಥಿಸಲು ಹೇಳುತ್ತಾರೆ. ಕೊನೆಗೆ ದೇವಿ ಭಾಗವತ ಶ್ರವಣ ಮಾಡಿದ್ದರಿಂದ ಮತ್ತೆ ಹಿಂದಿನ ರಾಜಕುಮಾರ ರೂಪ ಪಡೆಯುತ್ತಾನೆ.