Sep 27, 2021, 1:42 PM IST
ಒಂದು ದಿನ ಪಾಂಡವರ ಏಳಿಗೆ ಸಹಿಸಲಾಗದೇ ಧುರ್ಯೋಧನ, ತಂದೆಯ ಬಳಿ ಹೋಗಿ ದೂರುತ್ತಾನೆ. ವಂಶಪಾರಂಪರ್ಯವಾಗಿ ಬಂದ ರಾಜ್ಯ ಸಂಪತ್ತನ್ನು ಪಾಂಡವರು ಅನುಭವಿಸುವಂತಾಗಿದೆ. ನಾವು ಏನೂ ಇಲ್ಲದಂತೆ ಆಗಿದ್ದೇವೆ. ಪಾಂಡವರನ್ನು ಹೇಗಾದರೂ ಮಾಡಿ ರಾಜ್ಯದಿಂದ ಗಡಿಪಾರು ಮಾಡಿ ಎನ್ನುತ್ತಾನೆ. ಶಕುನಿ, ಕರ್ಣರ ಬಳಿ ಇದನ್ನು ಚರ್ಚಿಸುತ್ತಾನೆ. ಇದು ವಿಧುರನಿಗೆ ಗೊತ್ತಾಗುತ್ತದೆ. ಆತ ಹೋಗಿ ಕುಂತಿಯ ಬಳಿ ಇರುವ ವಿಚಾರವನ್ನು ಹೇಳುತ್ತಾನೆ. ನಿನ್ನ ಮಕ್ಕಳನ್ನು ಕರೆದುಕೊಂಡು ಹೋಗಿ ತಕ್ಷಣ ಹೊರಡಿ ಎನ್ನುತ್ತಾರೆ.