Mar 5, 2022, 1:18 PM IST
ರಷ್ಯಾ ಘೋರ ಯುದ್ಧ(Russia Ukraine War)ದ ಮಧ್ಯೆಯೇ ಬಬಲಾದಿ ಮಠ(Babaladi Math)ದ ಭವಿಷ್ಯ ಮತ್ತೊಂದು ಬಾಂಬ್‌ನಂತೆ ಎರಗಿದೆ. ಹೌದು, ಬಬಲಾದಿ ಮಠದ ಪೀಠಾಧಿಕಾರಿ ಸಿದ್ದು ಮುತ್ಯಾ(Siddu Muttya) ಗೂಢಾರ್ಥದ ಮೂಲಕ ಕೆಡುಕಿನ ಮುನ್ಸೂಚನೆ ನೀಡಿದ್ದಾರೆ.
ಭೂಕಾಂತಿ ನಡುಗೀತು, ಮತ್ತೆ ಸುನಾಮಿ, ಸುಂಟರಗಾಳಿ, ಭೂಕಂಪನ ಹೆಚ್ಚೀತು
ಜಗತ್ತಿನಲ್ಲಿ ಹೆಚ್ಚಲಿದೆ ಪಾಪ, ಶುರುವಾಗಲಿದೆ ಕಲಿಪುರುಷನ ಅಸಲಿ ಆಟ
ಕೈ ಬಳೆ ಒಡೆದಾವು, ಕಣ್ಣೀರು ಹರಿದಾವು ಎನ್ನುವ ಮೂಲಕ ಜಗತ್ತು ಅವನತಿಯ ಹಾದಿಯಲ್ಲೇ ಈ ವರ್ಷವೂ ಮುಂದುವರಿಯಲಿದೆ ಎಂಬ ಸೂಚನೆ ನೀಡಿದ್ದಾರೆ.
Budh Gochar: ಕುಂಭ ರಾಶಿಗೆ ಬುಧನ ಪ್ರವೇಶ, ಇನ್ನು ಬದಲಾಗಲಿದೆ ಈ ರಾಶಿಗಳ ಅದೃಷ್ಟ
ಕಳೆದ ವರ್ಷ ಇವರು ನೀಡಿದ ಯುದ್ಧದ ಭವಿಷ್ಯ ಸತ್ಯವಾಗಿದೆ. ಇದಲ್ಲದೆ ರಾಜಕೀಯ ಸಂಬಂಧವಾಗಿ ಹೇಳಿದ ಭವಿಷ್ಯಗಳು ಕೂಡಾ ನಿಜವಾಗಿವೆ. ಇದೀಗ 2022ರ ಕಾಲಜ್ಞಾನ ಮಾಹಿತಿ ನೀಡಿರುವ ಮುತ್ಯಾ, ಮುಂಗಾರು ಮಳೆಯಾಗಿ ಫಲವಾಗಿ ಬೆಳೆದು ಹಿಂಗಾರು ಮಧ್ಯಮ ಫಲವಿದೆ. ಅತಿವೃಷ್ಟಿ, ಅನಾವೃಷ್ಟಿಗಳೆರಡೂ ಬಾಧಿಸಲಿವೆ. ದೇಶದೊಳಗೆ ಅಹಂಕಾರ ಹೆಚ್ಚಾಗಿ ಕೆಟ್ಟ ಪರಿಣಾಮಗಳಾಗುತ್ತವೆ. ತಂತ್ರಗಳು ಅತಂತ್ರವಾಗುತ್ತವೆ. ದೇಶದಲ್ಲಿ ಶಾಂತಿ ಸೌಹಾರ್ದತೆ ಕೊರತೆ ಹೆಚ್ಚುತ್ತದೆ. ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಪಾಪ ಕೈ ಮೀರಿ ಹೋಗುತ್ತದೆ. ದೇಶ ದೇಶಗಳ ನಡುವೆ ಕಲಹ ಹೆಚ್ಚುತ್ತವೆ ಎಂದಿದ್ದಾರೆ. ಇವರ ಮಾತುಗಳು ಎಲ್ಲೆಡೆ ಹೆಚ್ಚಿರುವ ಆತಂಕಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು, ಭವಿಷ್ಯದ ಕುರಿತು ಅವರು ಇನ್ನೂ ಏನೇನು ಹೇಳಿದ್ದಾರೆ ಅವರ ಮಾತುಗಳಲ್ಲೇ ಕೇಳೋಣ ಬನ್ನಿ..